ಹೇರೂರು: ಗದ್ದೆಗಳಿದ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು
ಶಿರ್ವ : 92 ಹೇರೂರು -ಬಂಟಕಲ್ಲು ಸಾಮಾಜಿಕ ಕಾರ್ಯಕರ್ತ, ಪ್ರಗತಿಪರ ಕೃಷಿಕ, ಮಜೂರು ಗ್ರಾಪಂ ಸದಸ್ಯ ವಿಜಯ್ ಧೀರಜ್ ಗದ್ದೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ರೈತರ ಕಾಯಕವನ್ನು ಪ್ರತ್ಯಕ್ಷವಾಗಿ ನೋಡಿ ಅನುಭವವನ್ನು ಪಡೆದುಕೊಂಡರು.
ತಾವೇ ಗದ್ದೆಗಿಳಿದು ಹದ ಮಾಡಿದ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ಪಾತಿಕ್ಷಿಕೆಯನ್ನು ಅನುಭವಿಸಿದರು. ಕೆಸರು ಗದ್ದೆ ಯಲ್ಲಿ ಕುಣಿದು ಕುಪ್ಪಳಿಸಿ ಮಾಜಾವನ್ನೂ ಅನುಭವಿಸಿದರು. ಸಮೀಪದ ಕೆರೆಯ ನೀರಿಗಿಳಿದು ಜಲಕ್ರೀಡೆ ಆಡಿದರು.
ಶಿರ್ವ ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್, ಗೈಡ್ಸ್ ವಿಭಾಗದ 100 ವಿದ್ಯಾರ್ಥಿಗಳು ಭಾಗವಹಿಸಿದಲ್ಲದೆ ಸ್ಥಳೀಯ 75ಕ್ಕೂ ಅಧಿಕ ಗ್ರಾಮಸ್ಥರೂ, ಜೊತೆಗೆ ಬಂಟಕಲ್ಲು ಲಯನ್ಸ್ ಸದಸ್ಯರೂ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು. ಶಾಲಾ ಸ್ಕೌಟ್, ಗೈಡ್ಸ್ ಶಿಕ್ಷಕರು ನೇತೃತ್ವ ವಹಿಸಿದ್ದರು.
ಕೃಷಿಭೂಮಿಯ ಮಾಲಕ ವಿಜಯ್ ಧೀರಜ್ ಮಾತನಾಡಿ, ನಿಮ್ಮನ್ನು ರೈತರನ್ನಾಗಿ ಮಾಡಲು ಕಲಿಸುತ್ತಿಲ್ಲ. ಆದರೆ ರೈತರು ಹೇಗೆ ಬದುಕು ಸಾಗಿಸುತ್ತಿದ್ದಾರೆ ಎನ್ನುವುದನ್ನು ಮನವರಿಕೆ ಮಾಡುವುದರ ಜೊತೆಗೆ ನಾವು ಊಟ ಮಾಡುವ ಅನ್ನ ಹೇಗೆ ಮತ್ತು ಎಲ್ಲಿಂದ ತಯಾರಾಗುತ್ತಿದೆ, ಅಕ್ಕಿಯ ಮೂಲ ಎಲ್ಲಿ ಎಂಬ ಜ್ಞಾನವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಸಂತಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲ ರೆ.ಫಾ. ಲೆಸ್ಲಿ ಮಾತನಾಡಿ ದರು. ಬಂಟಕಲ್ಲು ಲಯನ್ಸ್ ಅಧ್ಯಕ್ಷ ಉಮೇಶ್ ಕುಲಾಲ್ ಶುಭ ಹಾರೈಸಿದರು. ಶಾಲಾ ಪ್ರಾಂಶುಪಾಲ ರೆ.ಫಾ.ರೊಲ್ವಿನ್ ಜೋಯ್ ಅರಾನ್ಹಾ ಮಾತನಾಡಿ ದರು. ಅಶ್ವಿನಿ ಸಿಯೋನಾ ಸಲ್ಡಾನ್ಹಾ ನಿರೂಪಿಸಿದರು. ಜೋಸಿಲ್ ನೊರೋನ್ಹಾ ವಂದಿಸಿದರು.