ಹಿರಿಯಡ್ಕ: ಮಹಿಳೆಯ ಮುಖಕ್ಕೆ ಬಟ್ಟೆ ಹಾಕಿ ಚಿನ್ನದ ಸರ ಸುಲಿಗೆ
ಹಿರಿಯಡ್ಕ, ಅ.10: ಮನೆ ಬಳಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಮುಖಕ್ಕೆ ಬಟ್ಟೆ ಹಾಕಿ ಕತ್ತಿನಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿರುವ ಘಟನೆ ಅ.9ರಂದು ಸಂಜೆ ವೇಳೆ ನಡೆದಿದೆ.
ಪೆರ್ಡೂರಿನ ಸುಧಾಕರ ಎಂಬವರ ತಾಯಿ ಮನೆಯ ಹೊರಗಿನ ಬಟ್ಟೆ ಒಗೆಯುವ ಕಲ್ಲಿನ ಬಳಿ ಪಾತ್ರೆ ತೊಳೆಯುತ್ತಿದ್ದು, ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಅವರ ಮುಖಕ್ಕೆ ಬಟ್ಟೆಯನ್ನು ಮುಸುಕು ಹಾಕಿ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದನು. ಇದರ ಮೌಲ್ಯ 88,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story