ಹೆಬ್ರಿ : ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡ; ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ
ಹೆಬ್ರಿ, ನ.1: ಸರಕಾರಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಹೋದ ಅಧಿಕಾರಿಗಳ ಕರ್ತವ್ಯ ಅಡ್ಡಿ ಪಡಿಸಿರುವ ಘಟನೆ ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದಲ್ಲಿ ಅ.27ರಂದು ನಡೆದಿದೆ.
ನಾಡ್ಪಾಲು ಗ್ರಾಮದ ಸರಕಾರಿ ಸರ್ವೆ ನಂಬ್ರದಲ್ಲಿ ಸುಧಾಕರ ಎಂಬವರು ಅಕ್ರಮವಾಗಿ ಒತ್ತುವರಿ ಮಾಡಿ ಯಾವುದೇ ಪರವಾನಿಗೆ ಪಡೆಯದೆ ವಾಸ್ತವ್ಯದ ಕಟ್ಟಡವನ್ನು ನಿರ್ಮಿಸುತ್ತಿದ್ದು, ಹೆಬ್ರಿ ತಹಶೀಲ್ದಾರ್ ಆದೇಶದಂತೆ ಹೆಬ್ರಿ ಹೋಬಳಿ ಕಂದಾಯ ನಿರೀಕ್ಷಕ ಹಿತೇಶ್ ಯು.ಬಿ.(43) ಇತರ ಸರಕಾರಿ ನೌಕರರೊಂದಿಗೆ ಅಕ್ರಮ ಕಟ್ಟಡ ತೆರವುಗೊಳಿಸಲು ಹೋಗಿದ್ದರು.
ಅಲ್ಲಿ ಆರೋಪಿಗಳಾದ ಸುಧಾಕರ, ಸುಜಾತ, ರತ್ನಾ, ವನಜ, ಸುಜಾತ ಎಂಬವರು ಸೇರಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story