ನವಜೀವನ ಲೇ ಕೌನ್ಸಿಲರಗಳ ತರಬೇತಿ ಕಾರ್ಯಾಗಾರ ಉದ್ಘಾಟನೆ
ಉಡುಪಿ, ಅ.3: ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಹಾಗೂ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಮತ್ತು ಒನ್ ಗುಡ್ ಸ್ಟೆಪ್ ಇವರ ಜಂಟಿ ಆಶ್ರಯದಲ್ಲಿ ನವಜೀವನ ಲೇ ಕೌನ್ಸಿಲರಗಳ ತರಬೇತಿ ಕಾರ್ಯಗಾರ ಕೋರ್ಸಿನ ಮೊದಲ ಬ್ಯಾಚಿನ ತರಗತಿಗಳ ಉದ್ಘಾಟನೆಯನ್ನು ಬೆಂಗಳೂರು ನಿಮಾನ್ಸ್ ಮನೋವೈದ್ಯಕೀಯ ವಿಭಾಗದ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ.ಸಿ.ಆರ್.ಚಂದ್ರಶೇಖರ್ ಸೋಮವಾರ ನೆರವೇರಿಸಿದರು.
ಕ್ಷೇಮ ಮಂಗಳೂರು ಇದರ ಮನೋ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ಶ್ರಿನಿವಾಸ ಭಟ್ ಲೇ ಕೌನ್ಸಿಲರ್ ತರಬೇತಿ ಕೋರ್ಸಿನ ಕ್ಯಾಲೆಂಡರ್‌ನ ಅನಾವರಣಗೊಳಿಸಿದರು. ವೇದಿಕೆಯಲ್ಲಿ ಒನ್ ಗುಡ್ ಸ್ಟೆಪ್‌ನ ಸ್ಥಾಪಕ ಅಮಿತಾ ಪೈ ಮತ್ತು ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ, ಡಾ.ಮಾನಸ್ ಈ.ಆರ್. ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಮನಶಾಸ್ತ್ರಜ್ಞ ನಾಗರಾಜ್ ಮೂರ್ತಿ ವಂದಿಸಿದರು. ಆಪ್ತ ಸಮಾಲೋಚಕಿ ಪದ್ಮ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
ಈ ತರಬೇತಿ ಕಾರ್ಯಗಾರ ಕೋರ್ಸಿನಲ್ಲಿ 27ಮಂದಿ ಅಭ್ಯರ್ಥಿಗಳು ಭಾಗವಹಿಸಿದ್ದು, ನಂತರ ಮೊದಲ ದಿನದ ತರಬೇತಿ ವಿಷಯಗಳ ಬಗ್ಗೆ ತರಗತಿ ಗಳನ್ನು ನಡೆಸಲಾಯಿತು.