ಉಡುಪಿ: ಗಾಯಗೊಂಡ ಪುನುಗುಬೆಕ್ಕಿನ ರಕ್ಷಣೆ

ಉಡುಪಿ: ನಗರದಲ್ಲಿ ನೆಲೆಸಿದ್ದ ಗಾಯಾಳು ಪುನುಗು ಬೆಕ್ಕನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಬುಧವಾರ ರಕ್ಷಿಸಿರುವ ಘಟನೆ ನಡೆದಿದೆ.
ಬೀದಿ ನಾಯಿಗಳು ಕಾಡಬೆಕ್ಕಿನ ಮೇಲೆ ಎರಗಿ ಗಾಯಗೊಳಿಸಿದರಿಂದ ಬೆಕ್ಕು ಅಸಹಾಯಕ ಸ್ಥಿತಿಯಲ್ಲಿತ್ತು. ಪೊದೆಯೊಳಗೆ ಅಡಗಿ ಕೂತು ಪ್ರಾಣ ರಕ್ಷಿಸಿಕೊಂಡಿತ್ತು. ವಿಷಯ ತಿಳಿದ ಒಳಕಾಡುವರು ಕಾಡುಬೆಕ್ಕನ್ನು ಹಿಡಿದು, ಪಶುವೈದ್ಯ ಡಾ.ಸಂದೀಪ್ ಶೆಟ್ಟಿ ಅವರಲ್ಲಿ ಚಿಕಿತ್ಸೆಗೆ ಒಳಪಡಿಸಿ, ಬಳಿಕ ಆದಿ ಉಡುಪಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
Next Story