ಉಡುಪಿ ವಲಯದ ಐಕ್ಸ್ ಅಂತರ್ ಶಾಲಾ ಥ್ರೋ ಬಾಲ್ ಪಂದ್ಯಾಟ
ಶಿರ್ವ, ಆ.30: ಉಡುಪಿ ವಲಯದ ಐಕ್ಸ್ ಅಂತರ್ ಶಾಲಾ ತ್ರೋಬಾಲ್ ಪಂದ್ಯಾಟವನ್ನು ಶಿರ್ವದ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.
17ರ ವಯೋಮಿತಿ ಬಾಲಕರ ವಿಭಾಗದಲ್ಲಿ ಪ್ರಥಮ- ಕುಂಜಾರುಗಿರಿ ಆನಂದತೀರ್ಥ ವಿದ್ಯಾಲಯ ಹಾಗೂ ದ್ವಿತೀಯ- ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್. ಬಾಲಕಿಯರ ವಿಭಾಗದಲ್ಲಿ ಪ್ರಥಮ- ಶಿರ್ವ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ, ದ್ವಿತೀಯ- ಬ್ರಹ್ಮಾವರ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್.
ವಯೋಮಿತಿ 14ರ ಬಾಲಕರ ವಿಭಾಗದಲ್ಲಿ ಪ್ರಥಮ- ಎಸ್.ಆರ್.ಎಸ್. ಸ್ಕೂಲ್ ಉಡುಪಿ, ದ್ವಿತೀಯ- ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ, ಕನ್ನರ್ಪಾಡಿ, ಬಾಲಕಿಯರ ವಿಭಾಗದಲ್ಲಿ ಪ್ರಥಮ- ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ, ಶಿರ್ವ, ದ್ವಿತೀಯ- ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ.
ಈ ಸ್ಫರ್ಧೆಯಲ್ಲಿ ಮೇಲಿನ ನಾಲ್ಕು ವರ್ಗಗಳಲ್ಲಿ ಉಡುಪಿ ಜಿಲ್ಲೆಯ 21 ಶಾಲೆಗಳಿಂದ ಒಟ್ಟು 63 ತಂಡಗಳು ಭಾಗವಹಿಸಿದ್ದವು. ಸಮಾರೋಪ ಸಮಾರಂಭದಲ್ಲಿ ಕುಂಜಾರುಗಿರಿ ಪಾಜಕ ಆನಂದತೀರ್ಥ ಶಾಲೆಯ ಪ್ರಾಂಶು ಪಾಲೆ ಡಾ.ಗೀತಾ ಶಶಿಧರ್ ತಂಡಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.
ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಡಾ.ಸಹನಾ ಹೆಗ್ಡೆ, ಉಪಪ್ರಾಂಶುಪಾಲೆ ನೀಶಾ ಶೆಟ್ಟಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ವಿಜಯ್ ಕುಮಾರ್, ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ಸಂಘಟಿಸಿದರು. ವಿದ್ಯಾರ್ಥಿ ಗಳಾದ ಅತೀಬ್ ಸ್ವಾಗತಿಸಿ, ರಿಷಿಕೇಶ್ ವಂದಿಸಿ, ಸಹನ್ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.