ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಹುಸೇನ್, ಹಿರಿಯ ಉಪಾಧ್ಯಕ್ಷರಾಗಿ ಬಿ.ಎಸ್.ಎಫ್.ರಫೀಕ್ ಆಯ್ಕೆ
ಇಸ್ಮಾಯಿಲ್ ಹುಸೇನ್ | ಬಿ.ಎಸ್.ಎಫ್.ರಫೀಕ್
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಹುಸೇನ್, ಹಿರಿಯ ಉಪಾಧ್ಯಕ್ಷರಾಗಿ ಬಿ.ಎಸ್.ಎಫ್.ರಫೀಕ್ ಆಯ್ಕೆ
ಉಡುಪಿ, ಜ.4: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ 2025-26ನೇ ಸಾಲಿನ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಹುಸೇನ್ ಕಟಪಾಡಿ ಮತ್ತು ಹಿರಿಯ ಉಪಾಧ್ಯಕ್ಷರಾಗಿ ಬಿ.ಎಸ್.ಎಫ್.ರಫೀಕ್ ಕುಂದಾಪುರ ಆಯ್ಕೆಯಾಗಿದ್ದಾರೆ.
ಮಣಿಪಾಲದ ಮಸ್ಜಿದ್ ಎ ಮಣಿಪಾಲ್ ಸಭಾಂಗಣದಲ್ಲಿ ಶುಕ್ರವಾರ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಆರಂಭದಲ್ಲಿ ಒಕ್ಕೂಟದ ನಿರ್ಗಮನ ಅಧ್ಯಕ್ಷ ಯಾಸೀನ್ ಮಲ್ಪೆ ನೂತನ ಅಧ್ಯಕ್ಷ ಮುಹಮ್ಮದ್ ಮೌಲಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬಳಿಕ ನೂತನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆಗಳು ನಡೆದವು.
ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಇದ್ರೀಸ್ ಹೂಡೆ, ಶಾಭಾನ್ ಹಂಗ್ಲೂರು, ಇರ್ಷಾದ್ ನೇಜಾರ್, ಫಯಾಜ್ ಅಲಿ ಬೈಂದೂರು, ನಾಸಿರ್ ಶೇಖ್ ಬೈಲೂರು ಮತ್ತು ಶಭಿ ಅಹ್ಮದ್ ಖಾಜಿ ಕಾಪು, ಕಾರ್ಯದರ್ಶಿಯಾಗಿ ಟಿ.ಎಂ.ಜಫ್ರುಲ್ಲಾ ಹೂಡೆ, ಕೊಶಾಧಿಕಾರಿಯಾಗಿ ಸಯ್ಯದ್ ಫರೀದ್ ಉಡುಪಿ, ಸಂಘಟನಾ ಕಾರ್ಯದರ್ಶಿಯಾಗಿ ಮೌಲಾನಾ ಝಮೀರ್ ಅಹ್ಮದ್ ರಶಾದಿ ಆಯ್ಕೆಯಾದರು.
ಮೌಲಾನಾ ಝಮೀರ್ ಅಹ್ಮದ್ ರಶಾದಿ ಕುರಾನ್ ಪಠಿಸಿದರು. ಯಾಸೀನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಸ್ಮಾಯಿಲ್ ಹುಸೇನ್ ವಂದಿಸಿದರು.