ಕಾರ್ಕಳ: ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ
ವಿದ್ಯಾರ್ಥಿ ವೇತನ ವಿತರಣೆ, ಅಭಿನಂದನಾ ಕಾರ್ಯಕ್ರಮ
ಕಾರ್ಕಳ: ಆಟೋರಿಕ್ಷಾ ಚಾಲಕ ಮಾಲಕರ ಸಂಘ ಕಾರ್ಕಳ ತಾಲೂಕು ಇದರ ವಾರ್ಷಿಕ ಮಹಾಸಭೆ ಆನೇಕೆರೆ ಶ್ರೀ ಕೃಷ್ಣ ಕ್ಷೇತ್ರ ಸಭಾ ಭವನದಲ್ಲಿ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾಡಿ ಕೆ ಬಾಲಕೃಷ್ಣ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಹಿರಿಯ ದಾನಿಗಳು ಆದ ಕೆ ಕಮಾಲಾಕ್ಷ ಕಾಮತ್ ಮಾತನಾಡಿ ಎಲ್ಲರೂ ಪರೋಪಕಾರ ಮಾಡಿ ಶಿಸ್ತಿನಿಂದ ತಮ್ಮ ವೃತ್ತಿಯನ್ನು ಮಾಡಬೇಕೆಂದು ತಿಳಿಸಿದರು.
ಕುಕ್ಕುಂದೂರು ದುರ್ಗಾ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಜಗದೀಶ್ ಹೆಗ್ದೆ ಉಪಸ್ಥಿತರಿದ್ದು ಎಲ್ಲಾ ರಿಕ್ಷಾ ಚಾಲಕರು ಮಾದರಿಯಾಗಿ ಬೆಳೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷರಾದ ಕೆ ಬಾಲಕೃಷ್ಣ ಶೆಟ್ಟಿ ಮಾತನಾಡಿ ಎಲ್ಲಾ ರಿಕ್ಷಾ ಚಾಲಕರು ಕಾನೂನು ಪಾಲನೆ ಮಾಡಬೇಕು ತಮ್ಮ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕೆಂದು ಎಂದರು.
ಈ ಸಂದರ್ಭ ವೃತ್ತಿನಿರತ ಹಿರಿಯ ರಿಕ್ಷಾ ಚಾಲಕರಿಗೆ, ಸಾಧಕ ರಕ್ಷಾ ಚಾಲಕರಿಗೆ, ಸಾಧಕ ರಿಕ್ಷಾ ಚಾಲಕರ ಮಕ್ಕಳಿಗೆ ಸನ್ಮಾನಿಸಲಾಯಿತು.
2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪ್ರಥಮ ಪಿ ಯು ಸಿ,ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಉಪಾಧ್ಯಕ್ಷ ವಿಶ್ವನಾಥ ಬಂಡಾರಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ
ಸಂತೋಷ್ ರಾವ್ ಪ್ರಸ್ತಾವಿಕ ಭಾಷಣ ಮಾಡಿದರು. ಕಾರ್ಯದರ್ಶಿ ಅಣ್ಣಿ ಮಡಿವಾಳ ವರದಿ ನೀಡಿದರು. ಕೋಶಾಧಿಕಾರಿ ಹರೀಶ್ ದೇವಾಡಿಗ ಲೆಕ್ಕಪತ್ರ ಮಂಡನೆ ಮಾಡಿದರು. ವಲಯ ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಶಿವಾನಂದ ಪೂಜಾರಿ ವಂದಿಸಿದರು. ದಿನೇಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ 204 -25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು