ಕಾರ್ಕಳ : ಕಾಂಗ್ರೆಸ್ ಜನಸೇವಾ ಕಚೇರಿ ಉದ್ಘಾಟನೆ

ಕಾರ್ಕಳ : ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸಹಾಯಕವಾಗುವಂತೆ ಮತ್ತು ಜನಸೇವೆಗೆ ಪೂರಕವಾಗುವಂತೆ ಕಾರ್ಕಳದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಬಳಿಯಲ್ಲಿರುವ ಮನೀಶ್ ಕಾಂಪ್ಲೆಕ್ಸ್‌ನಲ್ಲಿ "ಕಾಂಗ್ರೆಸ್ ಜನಸೇವಾ ಕಚೇರಿ" ಉದ್ಘಾಟನೆಗೊಂಡಿತು.
ಕಚೇರಿ ಉದ್ಘಾಟಿಸಿ ಮಾತನಾಡಿದ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯಶೆಟ್ಟಿ ಮುನಿಯಾಲು ಅವರು, ಕಾಂಗ್ರೆಸ್ ಜನಸೇವಾ ಕಚೇರಿಯು ಜನ ಸೇವೆಯೇ ಜನಾರ್ಧನ ಸೇವೆ ಎನ್ನುವ ಧ್ಯೇಯದೊಂದಿಗೆ ಬೈಲೂರು ಭಾಗದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲಿ ಎಂದು ಹಾರೈಸಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ನೂತನ ಕಾರ್ಯಾಲಯಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಹಿರ್ಗಾನ ಸೊಸೈಟಿ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಕರುಣಾಕರ ಹೆಗ್ಡೆ, ಬೈಲೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉದಯ್ ಶೆಟ್ಟಿ, ನೀರೆ ಗ್ರಾಮೀಣ ಅಧ್ಯಕ್ಷ ಪ್ರಸನ್ನ ಆಚಾರ್ಯ, ಎರ್ಲಪಾಡಿ ಗ್ರಾಮೀಣ ಅಧ್ಯಕ್ಷ ಸಚ್ಚಿನ್ ಶೆಟ್ಟಿ, ಸಾಣೂರು ಗ್ರಾಮೀಣ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ, ಹಿರಿಯ ಕಾಂಗ್ರೆಸ್ ಮುಖಂಡ ಬೋಜ ಶೆಟ್ಟಿ, ಅನಿಲ್ ನೆಲ್ಲಿಗುಡ್ಡೆ, ಕೆ.ಎಂ.ಎಫ್ ಸುಧಾಕರ್ ಶೆಟ್ಟಿ ಅಬ್ದುಲ್ಲಾ ಸಾಣೂರು, ರೀನಾ, ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು, ಉಪಸ್ಥಿತರಿದ್ದರು.
ವಿದ್ಯಾರ್ಥಿ ಮುಖಂಡ ಕನಿಷ್ಕ್ ಸ್ವಾಗತಿಸಿದರು, ಆಶಾ ಶೆಟ್ಟಿ ಧನ್ಯವಾದವಿತ್ತರು ನಿತೀಶ್ ಕರ್ಕೇರ ಕಾರ್ಯಕ್ರಮವನ್ನು ನಿರ್ವಹಿಸಿದರು,