ಕಾರ್ಕಳ-ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮರಾಠಿ ಸಮ್ಮಿಲನ
ಕಾರ್ಕಳ : ಕಾರ್ಕಳ-ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ಇದರ ಆಶ್ರಯದಲ್ಲಿ ತಾಲೂಕು ಮರಾಠಿ ಸಮ್ಮಿಲನ ಕಡ್ತಲ ಸಿರಿಬೈಲು ದೇವಸ್ಥಾನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಶೇಖರ ಕಡ್ತಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಸಂತೋಷ್ ಕುಮಾರ್, ಚಂದ್ರ ನಾಯ್ಕ್ ಕೋಟೇಶ್ವರ, ವಿ.ಪಿ ನಾಯ್ಕ್ ಮಂಗಳೂರು ಅವರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಶಂಕರ್ ನಾಯ್ಕ್, ಉಪಾಧ್ಯಕ್ಷರಾದ ಸುಗಂಧಿ ನಾಯ್ಕ್, ಸುಧಾಕರ ನಾಯ್ಕ್, ಮಹಿಳಾ ಘಟಕ ಅಧ್ಯಕ್ಷೆ ಶಶಿಕಲ ಹಿರ್ಗಾನ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಪವನ್ ದುರ್ಗಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಎಂಟು ಮಂದಿ ಸಾಧಕರಿಗೆ ಸಾಧಕ ಪ್ರಶಸ್ತಿ, ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಂಘದ ವಾರ್ಷಿಕ ಮಹಾಸಭೆ,ನಮ್ಮ ಭಾಷೆ ಮತ್ತು ಸಂಸ್ಕೃತಿ ವಿಚಾರವಾಗಿ ಹೋಳಿ ಹಬ್ಬದ ಪದ, ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಸಮಾಜದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಿತೇಶ್ ಕುಮಾರ್ ಬಳಗದವರಿಂದ ಭಕ್ತಿಗಾನ ಸೌರಭ ನಡೆಯಿತು.
ಕೋಶಾಧಿಕಾರಿ ಶ್ರೀನಿವಾಸ ನಕ್ರೆ ಲೆಕ್ಕಪತ್ರ ಮಂಡಿಸಿದರು. ಯುವ ಘಟಕದ ಅಧ್ಯಕ್ಷ ನಾಗೇಂದ್ರ ಹೆಬ್ರಿ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ್ ಇರ್ವತ್ತೂರು ವಾರ್ಷಿಕ ವರದಿ ವಾಚನ ಮತ್ತು ಧನ್ಯವಾದ ಸಲ್ಲಿಸಿದರು, ಶಿಕ್ಷಕಿ ನಿವೇದಿತಾ ಎಡಪದವು ಕಾರ್ಯಕ್ರಮ ನಿರೂಪಿಸಿದರು.