ಕಾರ್ಕಳ| ಹೋಮ್ ನರ್ಸ್ನಿಂದ ಲಕ್ಷಾಂತರ ರೂ. ವಂಚನೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ರತ್ನಾಕರ - ಕಾರ್ತಿಕ್ ಶೆಟ್ಟಿ
ಕಾರ್ಕಳ, ಡಿ.16: ಹೋಮ್ ನರ್ಸ್ ಕೆಲಸಕ್ಕೆಂದು ಬಂದು ಲಕ್ಷಾಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದಾರೆ.
ತೆಳ್ಳಾರ್ ನಿವಾಸಿ ರತ್ನಾಕರ ಸುವರ್ಣ ಯಾನೆ ಭೂಮಿಕಾ ರತ್ನಾಕರ (50) ಹಾಗೂ ಕುಕ್ಕುಂದೂರು ಕುಪ್ಪಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (28) ಬಂಧಿತ ಆರೋಪಿಗಳು.
ರತ್ನಾಕರ ಮಾಲಕತ್ವದ ಅಲೈಟ್ಕೇರ್ ಎಂಬ ಸಂಸ್ಥೆಯ ಮೂಲಕ ಕಾರ್ತಿಕ ಶೆಟ್ಟಿ ಕಾರ್ಕಳ ಎಂಬಾತ ಪುರಸಭೆ ವ್ಯಾಪ್ತಿಯ ನಿವಾಸಿ ಶಶಿಧರ (75) ಎಂಬವರ ಮನೆಗೆ ಹೊಂ ನರ್ಸ್ ಕೆಲಸಕ್ಕೆ ಬಂದಿದ್ದನು. ನ.9ರಂದು ರತ್ನಾಕರ, ಶಶಿಧರ್ಗೆ 10,000ರೂ. ನಗದು ಹಣ ನೀಡಿ ಒತ್ತಾಯ ಪೂರ್ವಕವಾಗಿ ಕಾರ್ತಿಕ್ ಖಾತೆಗೆ ಗೂಗಲ್ ಪೇ ಮಾಡಿಸಿದ್ದನು. ಈ ವೇಳೆ ಗೂಗಲ್ ಪೇ ಪಿನ್ ನಂಬರ್ ನೋಡಿದ್ದ ರತ್ನಾಕರ, ನ.10ರಿಂದ ಡಿ.8ರವರೆಗೆ ಶಶಿಧರ್ ಅವರ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮುಖಾಂತರ 9,80,000ರೂ. ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.