ಕಾರ್ಕಳ : ಸಾಧನಾ ಆಶ್ರೀತ್‌ಗೆ ರಾಷ್ಟ್ರೀಯ ರತ್ನ ಪ್ರಶಸ್ತಿ ಪ್ರದಾನ
ಕಾರ್ಕಳ : ಇಂಟರ್ ನ್ಯಾಶನಲ್ ಹ್ಯೂಮನ್ ರೈಟ್ ಯುನಿವರ್ಸಿಟಿ, ಇಂಟರ್ ನ್ಯಾಶನಲ್ ಅಕ್ರಿಡಿಟೇಶನ್ ಆರ್ಗನೈಸೇಶನ್ ( ಐ ಎ ಓ ) ವತಿಯಿಂದ ನೀಡುವ ರಾಷ್ಟ್ರೀಯ ರತ್ನ ಪ್ರಶಸ್ತಿಯನ್ನು ಸಮಾಜಸೇವೆ ಹಾಗೂ ವಸ್ತ್ರ ವಿನ್ಯಾಸ ಶಿಕ್ಷಣಕ್ಕಾಗಿ ಕಾರ್ಕಳದ ಸುಮೇಧಾ ಫ್ಯಾಶನ್ ಸಂಸ್ಥಾಪಕಿ, ಖ್ಯಾತ ಕಿರುತೆರೆ ವಸ್ತ್ರ ವಿನ್ಯಾಸಕಿ ಸಾಧನಾ ಆಶ್ರೀತ್ ಅವರಿಗೆ ನೀಡಿ ಗೌರವಿಸಲಾಯಿತು.
ಗೋವಾದ ಪಣಜಿಯ ಮೇನೇಜಸ್ ಬ್ರಗಾಂಝ ಇನ್ಸ್ಟಿಟ್ಯೂಟ್ ನ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭ ಎಎಸ್ ಜಿ ಎಸ್ ನ ನ್ಯಾಷನಲ್ ಆಂಡ್ ಇಂಟರ್ನ್ಯಾಷನಲ್ ಕಲ್ಚರಲ್ ಅಂಬಾಸಿಡರ್ ನ ಅಧ್ಯಕ್ಷ ಡಾ ಮಹೇಶ್ ಗೌಡ, ಐ ಎಚ್ ಡಿ ಯು ನ್ಯೂಡೆಲ್ಲಿ ವೈಸ್ ಚಾನ್ಸಲರ್ ಡಾ ವಿಶ್ವನಾಥ್ ಚಿಮ್ಕೋಡ್, ಕರ್ನಾಟಕ ಉಚ್ಚ ನ್ಯಾಯಾಲಯದ ಜ್ಯುಡಿಸಿಯಲ್ ಅಧಿಕಾರಿ ರೇವಣ್ಣ ಬಳ್ಳಾರಿ, ಗದಗ ಕೆ ಎಸ್ ಎಸ್ ಕಾಲೇಜ್‌ನ ಸೊಸಿಯೋಲಜಿ ವಿಭಾಗದ ನಿವ್ರತ್ತ ಮುಖ್ಯಸ್ಥೆ ಡಾ ಪ್ರೆಮಲತಾ ಹಿರೇಮಠ, ಗೋವಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿಧ್ದಣ್ಣ ಮೇಟಿ, ಜಾನಪದ ಕಲಾವಿದೆ ಡಾ ಬಿ ವಿ ಪದ್ಮಾವತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ ಶಶಿಕಲಾ ಬಿ, ಧಾರವಾಡ ಸತ್ತೂರು ಶ್ರೀ ಬಸವೇಶ್ವರ ರೂರಲ್ ಎಜುಕೇಶನ್ & ಡೆವಲಪ್ಮೆಂಟ್ ಟ್ರಸ್ಟ್ ಅಧ್ಯಕ್ಷ ಡಾ ಶರಣಪ್ಪ ಎಂ ಕೋಟಗಿ, ಗೋವಾ ಮಹಿಳಾ ಮಂಡಳಿ ಸದಸ್ಯೆ ವಿಜಯಲಕ್ಷ್ಮಿ ವಿಜಯಕುಮಾರ್ ಸುತಾರ್ ಉಪಸ್ಥಿತರಿದ್ದರು.