ಕಾರ್ಕಳ: ಪರೀಕ್ಷೆಯ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ
ಕಾರ್ಕಳ: ಪರೀಕ್ಷೆಗೆ ಹೆದರಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.4ರಂದು ಸಂಜೆ ವೇಳೆ ಮಿಯಾರು ಗ್ರಾಮದ ಬಲಿಪರಪಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಬಲಿಪರಪಾಡಿ ನಿವಾಸಿ ಕರ್ಣಾಕರ ಎಂಬವರ ಮಗ ರಂಜನ್ (17) ಎಂದು ಗುರುತಿಸಲಾಗಿದೆ.
ನಿಟ್ಟೆ ಕಾಲೇಜಿನಲ್ಲಿ ಇ ಆ್ಯಂಡ್ ಸಿ ಡಿಪ್ಲೋಮಾ ವಿದ್ಯಾಭ್ಯಾಸ ಮಾಡುತ್ತಿದ್ದ ಈತ, ಆ.4ರಂದು ಬೆಳಗ್ಗೆ ಇದ್ದ ಪರೀಕ್ಷೆಗೆ ಗೈರು ಹಾಜರಾಗಿದ್ದನು. ಈ ಬಗ್ಗೆ ಕಾಲೇಜಿನಿಂದ ಕರೆ ಮಾಡಿದ್ದರು.
ಕಾಲೇಜಿಗೆಂದು ಹೋಗಿದ್ದ ರಂಜನ್, ಮನೆಗೆ ಬಂದು ರೂಮಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story