ಕಾಂಗ್ರೆಸ್‌ನಿಂದ ‘ಕರ್ನಾಟಕ ಸಂಭ್ರಮ 50’ ವಿಶಿಷ್ಟ ಕಾರ್ಯಕ್ರಮ
ಉಡುಪಿ, ನ.1: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕ ಸಂಭ್ರಮ 50 ಎಂಬ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ವಿಶೇಷವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ ಉದ್ಘಾಟಿಸಿದರು. ಮಹಿಳಾ ಕಾಂಗ್ರೆಸ್ ಸದಸ್ಯರು ಹಳದಿ ಕೆಂಪು ಮಿಶ್ರಿತ ಸೀರೆಗಳಲ್ಲಿ ಬಂದು ಹಳದಿ ಹೂವಿನಿಂದ ರಂಗೋಲಿ ಗಳನ್ನು ಬಿಡಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು.
ಮಾಜಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್, ನಾಯಕರಾದ ನಾಗೇಶ್ ಉದ್ಯಾವರ್, ಕುಶಲ್ ಶೆಟ್ಟಿ, ಕೀರ್ತಿ ಶೆಟ್ಟಿ ಪ್ರಶಾಂತ್ ಜತ್ತನ್ನ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಕಡೆಕಾರು ಗ್ರಾಪಂ ಮಾಜಿ ಅಧ್ಯಕ್ಷೆ ಸರಸ್ವತಿ, ಗ್ರಾಪಂ ಸದಸ್ಯರಾದ ಸುಕನ್ಯಾ ಪೂಜಾರಿ, ರಂಜಿತಾ, ಅನುಷಾ, ಬ್ಲಾಕ್ ಪದಾಧಿ ಕಾರಿಗಳಾದ ಶಾಲಿನಿ ಪುರಂದರ್, ಆಶಾ ಚಂದ್ರಶೇಖರ್, ಪ್ರಮೀಳ, ಅರ್ಚನ, ರಮಾದೇವಿ, ತಾರಾ ಬನ್ನಂಜೆ, ಗೌರಿ , ವತ್ಸಲಾ , ಪ್ರತಿಮ, ಸರಸ್ವತಿ , ಲತಾ, ಶೋಭಾ ಬೇಕಲ್ , ಸುಂದರಿ, ಲೀಲಾ , ಗೀತಾ ಗರಡೆ, ಮಾಲತಿ ದೇವರಾಜ್, ಕಲಾವತಿ, ಗೀತಾ ಸಂತೆಕಟ್ಟೆ, ಜಯಂತಿ ಅಂಬಲಪಾಡಿ, ಕುಮುದಾ, ವಜ್ರಾಕ್ಷಿ, ಗೀತಾ, ವಿನೋದಾ ಇಂದ್ರಾಳಿ, ದೀಪಾ ಮೊದಲಾದವರು ಉಪಸ್ಥಿತರಿದ್ದರು.
ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ ಸ್ವಾಗತಿಸಿದರು. ಐರಿನ್ ಅಂದ್ರಾದೆ ವಂದಿಸಿದರು. ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.