ಕೊಡವೂರು ಬ್ರಾಹ್ಮಣ ಮಹಾಸಭಾದ ದಿನದರ್ಶಿಕೆ ಬಿಡುಗಡೆ
ಕಾರ್ಕಳ:ಕೊಡವೂರು ಬ್ರಾಹ್ಮಣ ಮಹಾ ಸಭಾದ ವತಿಯಿಂದ ಹೊಸ ವರುಷ 2025 ನೇ ಸಾಲಿನ ದಿನದರ್ಶಿಕೆಯನ್ನು ಕಡಿಯಾಳಿ ದೇವಸ್ಥಾನದ ಅಧ್ಯಕ್ಷರಾದ ವಿಜಯರಾಘವ ರಾವ್ ಬಿಡುಗಡೆಗೊಳಿಸಿ ದಿನದರ್ಶಿಕೆಯಲ್ಲಿ ಮುದ್ರಿತಗೊಂಡಿರುವ ವಿಷಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ ಸ್ವಾಗತಿಸಿ, ಸಮರ್ಥ್ ಸಂತೋಷ ಸಾಮಗ ಪ್ರಾರ್ಥಿಸಿದರು. ಗೌರವಾಧ್ಯಕ್ಷ ನಾರಾಯಣ ಬಲ್ಲಾಳ್ , ಕಾರ್ಯದರ್ಶಿ ಪ್ರವೀಣ್ ಬಲ್ಲಾಳ್, ದಿನದರ್ಶಿಕೆ ವಿನ್ಯಾಸಗೊಳಿಸಿದ ಪೂರ್ಣಿಮಾ ಜನಾರ್ದನ್ ಉಪಸ್ಥಿತರಿದ್ದರು.ಕೋಶಾಧಿಕಾರಿ ಚಂದ್ರಶೇಖರ್ ರಾವ್ ವಂದಿಸಿದರು.ರಾಜ ಶ್ರೀ ಪ್ರಸನ್ನ ನಿರೂಪಿಸಿದರು.
Next Story