ಕುಂದಾಪುರ| ಸೈಬರ್ ಕ್ರೈಮ್ ಪೊಲೀಸರ ಹೆಸರಿನಲ್ಲಿ ಮಹಿಳೆಗೆ ವಂಚನೆ
ಕುಂದಾಪುರ, ಸೆ.22: ಸೈಬರ್ ಕ್ರೈಮ್ ಪೊಲೀಸರ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂಗಳೂರಿನ ಭವಿಷ್ಯ ಎ.(30) ಎಂಬವರಿಗೆ ಸೆ.21ರಂದು ಅಪರಿಚಿತರು ಪೆಡೆಕ್ಸ್‌ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ನಿಮ್ಮ ಆಧಾರ ನಂಬ್ರದಿಂದ ಮುಂಬೈಯಿಂದ ಇರಾನ್‌ಗೆ ಒಂದು ಪಾರ್ಸೆಲ್ ಹೋಗುತ್ತಿದ್ದು ಅದರಲ್ಲಿ 5 ಇರಾನ್ ಪಾಸ್ ಪೋರ್ಟ್, ಕ್ರೆಡಿಟ್ ಕಾರ್ಡ್, ಲ್ಯಾಪ್‌ಟಾಪ್, ಎಂಡಿಎಂಎ ಇರುವುದಾಗಿ ತಿಳಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸುವುದಾಗಿ ತಿಳಿಸಿ ನೀವು ಕೂಡ ಸೈಬರ್ ಕ್ರೈಂಗೆ ದೂರು ನೀಡುವಂತೆ ಹೇಳಿ, ಮುಂಬೈ ಕ್ರೈಂ ಬ್ರ್ಯಾಂಚ್‌ಗೆ ಕರೆ ಕನೆಕ್ಟ್ ಮಾಡಿದರು.
ಆಗ ಓರ್ವ ಮಹಿಳೆ ಸೈಬರ ಕ್ರೈಂ ಅಧಿಕಾರಿ ಎಂದು ಹೇಳಿ ಮಾತನಾಡಿ ಭವಿಷ್ಯ ಅವರ ಆಧಾರ ಕಾರ್ಡ್ ಹಾಗೂ ಇತ್ಯಾದಿ ವಿವರಗಳನ್ನು ಪಡೆದು, ನೀವು ಇನ್ಟ್ಯಾಂಟ್ ಲೋನ್ ಮಾಡಿದರೆ ನಿಮಗೆ ಪ್ರಾಡ್ ಮಾಡಿದ ವ್ಯಕ್ತಿಗಳನ್ನು ಟ್ರೇಸ್ ಮಾಡಬ ಹುದು ಎಂದು ಹೇಳಿದರು. ಅದರಂತೆ ಭವಿಷ್ಯ ತನ್ನ ಖಾತೆಯಿಂದ ಕೂಡಲೇ ಲೋನ್ ಮಾಡಿಸಿ 8,78,760 ರೂ. ಹಣವನ್ನು ಭವಿಷ್ಯ ಅವರ ಖಾತೆಗೆ ಜಮಾ ಮಾಡಿಸಿದರು. ನಂತರ ಆರೋಪಿಗಳು ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿ ಕೊಂಡು ಭವಿಷ್ಯ ಅವರ ಬ್ಯಾಂಕ್ ಖಾತೆಯಲ್ಲಿದ್ದ 8,87,307ರೂ. ಹಣವನ್ನು ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.