ಸತ್ಯದಿಂದ ಗೆಲ್ಲುವ ವಕೀಲರು ಇಂದಿನ ಅಗತ್ಯ: ನ್ಯಾ.ದಿನೇಶ್ ಕುಮಾರ್
ಉಡುಪಿ, ಸೆ.30: ದೇಶದ ನ್ಯಾಯಾಲಯಗಳಲ್ಲಿ ಐದು ಕೋಟಿ ಪ್ರಕರಣ ಬಾಕಿ ಇದ್ದು ಸಿವಿಲ್ ಅಪೀಲ್ ಇತ್ಯರ್ಥಕ್ಕೆ ಹಲವು ವರ್ಷಗಳೇ ಬೇಕಾಗಿದೆ. ಸತ್ಯದಿಂದ ನ್ಯಾಯಾಧೀಶರು ಹಾಗೂ ನ್ಯಾಯಾಲಯವನ್ನು ಗೆಲ್ಲುವ ವಕೀಲರು ಇಂದಿನ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ನ್ಯಾಯಾಂಗ ಕಟ್ಟಡಗಳ ಸಮಿತಿ ಅಧ್ಯಕ್ಷ ನ್ಯಾ.ದಿನೇಶ್ ಕುಮಾರ್ ಹೇಳಿದ್ದಾರೆ.
ಉಡುಪಿ ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ನೈತಿಕ ಮೌಲ್ಯ ವೃದ್ಧಿಸಿದರೆ ಮಾತ್ರ ನ್ಯಾಯಾಲಯಗಳಲ್ಲಿರುವ ಪ್ರಕರಣಗಳ ಸಂಖ್ಯೆ ಇಳಿಕೆಯಾ ಗಲು ಸಾಧ್ಯವಾಗುತ್ತದೆ. ನ್ಯಾಯಯುತ ಹೋರಾಟಕ್ಕೆ ಅನುಗುಣ ವಾದ ಪ್ರಕರಣವನ್ನು ಮಾತ್ರ ನ್ಯಾಯವಾದಿಗಳು ಕೈಗೆತ್ತಿ ಕೊಳ್ಳಬೇಕು ಎಂದರು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇ ಗೌಡ ಮಾತನಾಡಿ, ಉಡುಪಿ ವಕೀಲರ ಸಂಘದ ನೂತನ ಕಟ್ಟಡಕ್ಕೆ 24ಕೋಟಿ ರೂ. ಅನುದಾನದ ಪ್ರಸ್ತಾವನೆಗೆ ಸಂಪುಟ ಅನುಮೋದನೆಯಾದರೆ ಶೀಘ್ರ ಟೆಂಡರ್ ಕರೆಯಲಾಗು ತ್ತದೆ. ಉಡುಪಿಯ ನ್ಯಾಯಾಲಯಗಳಲ್ಲಿ 33,000 ಪ್ರಕರಣಗಳು ಬಾಕಿ ಇದ್ದು, ರಾಜ್ಯದ ನ್ಯಾಯಾಲಯಗಳಲ್ಲಿ 22ಲಕ್ಷ ಹಾಗೂ ಹೈಕೋರ್ಟಿನಲ್ಲಿ 2.72ಲಕ್ಷ ಪ್ರಕರಣ ಬಾಕಿ ಇದೆ. ವಕೀಲರ ಸಂಖ್ಯೆ ಮೂರು ಪಟ್ಟು ಹೆಚ್ಚಿದ್ದರೂ 2014ರಲ್ಲಿದ್ದ ನ್ಯಾಯಾಧೀಶರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ ಎಂದು ತಿಳಿಸಿದರು.
ಅದ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ವಹಿಸಿದ್ದರು. ಜಯಶ್ರೀ ಉಪಸ್ಥಿತರಿ ದ್ದರು. ವಕೀಲರ ಸಂಘದ ನೂತನ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್., ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ, ಜತೆ ಕಾರ್ಯದರ್ಶಿ ರವೀಂದ್ರ ಬೈಲೂರು, ಖಜಾಂಚಿ ಗಂಗಾಧರ ಎಚ್.ಎಂ., ಕ್ರೀಡಾ ಕಾರ್ಯದರ್ಶಿ ಸುಮಿತ್ ಹೆಗ್ಡೆ, ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಅಧಿಕಾರ ಸ್ವೀಕರಿಸಿದರು.
ಮುದರಂಗಡಿ ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ಉಡುಪಿ ವಕೀಲರ ಸಂಘದ ಸದಸ್ಯೆ ನಮಿತಾ ಅವರನ್ನು ಸನ್ಮಾನಿಸ ಲಾಯಿತು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಉಡುಪಿ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.