ಸೇನಾಪುರ- ತೋಕೂರು ಮಧ್ಯೆ ನಿರ್ವಹಣಾ ಕಾರ್ಯ: ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಉಡುಪಿ, ಸೆ.2: ಕೊಂಕಣ ರೈಲು ಮಾರ್ಗದಲ್ಲಿ ಕುಂದಾಪುರ ತಾಲೂಕಿನ ಸೇನಾಪುರ ಹಾಗೂ ಮಂಗಳೂರಿನ ತೋಕೂರು ಮಧ್ಯೆ ಸೆ.7ರಂದು ಹಳಿ ನಿರ್ವಹಣಾ ಕಾರ್ಯ ಅಪರಾಹ್ನ 3 ರಿಂದ ಸಂಜೆ 6 ರವರೆಗೆ ಮೂರು ಗಂಟೆಗಳ ಕಾಲ ನಡೆಯಲಿರುವುದರಿಂದ ಅಂದು ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.
ರೈಲು ನಂ.10108 ಮಂಗಳೂರು ಸೆಂಟ್ರಲ್-ಮಡಂಗಾವ್ ಜಂಕ್ಷನ್ ಮೆಮು ಎಕ್ಸ್ಪ್ರೆಸ್ ರೈಲು ಸೆ.7ರಂದು ನಿಗದಿತ 3:30ಕ್ಕೆ ಬದಲಾಗಿ 75 ನಿಮಿಷ ತಡವಾಗಿ ಸಂಜೆ 4:45ಕ್ಕೆ ಮಂಗಳೂರಿನಿಂದ ಪ್ರಯಾಣ ಪ್ರಾರಂಭಿಸಲಿದೆ.
ರೈಲು ನಂ. 12124 ಮಂಗಳೂರು ಜಂಕ್ಷನ್- ಮುಂಬೈ ಸಿಎಸ್ಎಂಟಿ ಎಕ್ಸ್ಪ್ರೆಸ್ ರೈಲು ಮಂಗಳೂರು ಜಂಕ್ಷನ್ನಿಂದ ಸೆ.7ರಂದು ನಿಗದಿತ ಸಮಯ 4:35ಕ್ಕೆ ಬದಲಾಗಿ ಒಂದು ಗಂಟೆ ತಡವಾಗಿ 5:35ಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story