ಮಣಿಪಾಲ: ನ.14ರಂದು ಗಾಂಧಿ ಸೆಂಟರ್‌ನಲ್ಲಿ ನೆಹರು ಬಗ್ಗೆ ಉಪನ್ಯಾಸ
ಉಡುಪಿ, ನ.13: ಮಾಹೆ ಆಡಳಿತಕ್ಕೊಳಪಟ್ಟ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್‌ನ ಶಾಂತಿ ಪೀಠದ ವತಿಯಿಂದ ನ.14ರ ಮಂಗಳವಾರ ಅಪರಾಹ್ನ 3:15ಕ್ಕೆ ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕರಾದ ಡಾ.ರಾಜಾರಾಮ್ ತೋಳ್ಪಾಡಿ ಇವರಿಂದ ವಿಶೇಷ ಉಪನ್ಯಾಸ ಜರಗಲಿದೆ.
ಪೊಲಿಟಿಕಲ್ ಸಾಯನ್ಸ್ ಪ್ರೊ. ಡಾ.ತೋಳ್ಪಾಡಿ ಅವರು ‘ನೆಹರು ಮರು ವ್ಯಾಖ್ಯಾನ’ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇಂದಿನ ವಿಶ್ವ ಹಾಗೂ ಭಾರತೀಯ ರಾಜಕೀಯ ಸನ್ನಿವೇಶದಲ್ಲಿ ಭಾರತಕ್ಕೆ ಜವಾಹರಲಾಲ್ ನೆಹರು ಅವರ ಕೊಡುಗೆಯ ಕುರಿತಂತೆ ನ್ಯಾಯೋಚಿತ ಮೌಲ್ಯಮಾಪನ ನಡೆಸಬೇಕಾದ ಅಗತ್ಯವಿದೆ ಎಂದು ಗಾಂಧಿಯನ್ ಸೆಂಟರ್ ಪ್ರಕಟಣೆಯಲ್ಲಿ ತಿಳಿಸಿದೆ.
Next Story