ಮಣಿಪಾಲ: ಮಹಿಳೆಗೆ 12 ಲಕ್ಷ ರೂ. ವಂಚನೆ; ಪ್ರಕರಣ ದಾಖಲು
ಮಣಿಪಾಲ, ನ.5: ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ವಿ.ಪಿ.ನಗರದ ಸುಪ್ರಜಾ ಟಿ.ಎ.(34) ಎಂಬವರ ಮೊಬೈಲ್ಗೆ ಅ.27ರಂದು ಮಲ್ಟಿ ಅಸೆಟ್ ಪೋರ್ಟ್ ಪೋಲಿಯೋ ಎಂಬ ವಿಷಯದ ಬಗ್ಗೆ ಕರೆ ಬಂದಿದ್ದು ಅದರಂತೆ ಇವರು ಮೂರು ಕಂತುಗಳಲ್ಲಿ ಖಾತೆಯಿಂದ ಒಟ್ಟು 12,04,400ರೂ. ವರ್ಗಾವಣೆ ಮಾಡಿದ್ದರು. ಬಳಿಕ ಸುಪ್ರಜಾಗೆ ಹಣ ವರ್ಗಾವಣೆ ಮಾಡಿದ ವ್ಯಕ್ತಿಯು ಯಾವುದೇ ಮಾಹಿತಿ ಯನ್ನು ನೀಡದೇ, ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story