ಮಣಿಪಾಲ| ಐಟಿ ಅಧಿಕಾರಿಗಳ ದಾಳಿ ಬೆದರಿಕೆ: ಮಹಿಳೆಗೆ ಲಕ್ಷಾಂತರ ರೂ. ನಗ-ನಗದು ವಂಚನೆ
ಮಣಿಪಾಲ: ಐಟಿ ಅಧಿಕಾರಿಗಳು ದಾಳಿ ನಡೆಸುತ್ತಾರೆಂಬುದಾಗಿ ನಂಬಿಸಿ, ಮಹಿಳೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಪಡೆದು ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರಂಪಳ್ಳಿಯ ಜ್ಯೂಲಿಯಟ್ ಎಂಬವರು ಸುಮಾರು 4 ತಿಂಗಳಿನಿಂದ ಪೆರಂಪಳ್ಳಿಯ ಸುನೀತಾ ಎಂಬವರನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದು ಅ.29ರಂದು ಸುನೀತಾ, ಸ್ಟ್ಯಾನಿ ಎಂಬವರೊಂದಿಗೆ ಜ್ಯೂಲಿಯಟ್ ಮನೆಗೆ ಬಂದು ಐಟಿ ಅಧಿಕಾರಿಗಳು ಬಂದಿದ್ದಾರೆ, ನಿಮ್ಮ ಮನೆಗೆ ರೈಡ್ ಮಾಡುತ್ತಾರೆ, ಲಾಕರ್‌ನಲ್ಲಿ ಇದ್ದ ಹಣ ಹಾಗೂ ಒಡವೆಯನ್ನು ತೆಗೆಯಬೇಕು ಎಂದು ಹೇಳಿದ್ದಳು.
ಇದನ್ನು ನಂಬಿದ ಜ್ಯೂಲಿಯಟ್, ಲಾಕರ್‌ನಲ್ಲಿದ್ದ ಹಣದಲ್ಲಿ 1.50ಲಕ್ಷ ರೂ.ವನ್ನು ಬ್ಯಾಗ್‌ಗೆ ಹಾಕಿ ಉಳಿದ 7.50ಲಕ್ಷ ರೂ. ಹಾಗೂ 3 ಲಕ್ಷ ಮೌಲ್ಯದ ಡೈಮಂಡ್ ನೆಕ್ಲೆಸ್‌ನ್ನು ಸುನೀತಾ, ಚೀಲದಲ್ಲಿ ಹಾಕಿಕೊಂಡು ನನ್ನಲ್ಲಿ ಇರಲಿ ನಂತರ ಕೊಡುತ್ತೇನೆ ಎಂದು ಹೇಳಿದ್ದಳು. ಆ ಚಿನ್ನಾಭರಣ ಹಾಗೂ ನಗದನ್ನು ಸುನೀತಾ ಹಾಗೂ ಸ್ಟಾನಿ ತೆಗೆದುಕೊಂಡು ಹೋಗಿ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story