ಸಾಧನೆಯ ಮೂಲಕ ಬದುಕು ಸಾರ್ಥಕವಾಗಲಿ :ಪ್ರೊ .ಉಷಾ ನಾಯಕ್
ಕಾರ್ಕಳ : ನಿರ್ದಿಷ್ಟ ಗುರಿಯೊಂದಿಗೆ ಶ್ರಮ ಪಟ್ಟರೆ ಯಾವುದೂ ಅಸಾಧ್ಯ ವಲ್ಲ.ಮನಸ್ಸನ್ನು ಎಲ್ಲಿಯೂ ಕುಗ್ಗದಂತೆ ನೋಡಿಕೊಂಡು ಗುರಿಯತ್ತ ಸಾಗಬೇಕು. ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಇಂದಿನ ಸಮಾಜದಲ್ಲಿ ಯಾವುದೇ ಸಮಾಜಘಾತುಕ ಚಟುವಟಿಕೆಗಳಿಗೆ ಒಳಗಾಗದೆ ಒಳ್ಳೆಯ ಹವ್ಯಾಸಗಳನ್ನ ರೂಢಿಸಿ ಇತರರಿಗೆ ಮಾದರಿಯಾಗಬೇಕು .ಯಾವ ವೃತ್ತಿ ಕ್ಷೇತ್ರಕ್ಕೂ ಹೋದರೂ ಸಾಧನೆ ಮಾಡಿ ಬದುಕು ಸಾರ್ಥಕಗೊಳಿಸಿ ಎಂದು ಕಾರ್ಕಳ ವೆಂಕಟರಮಣ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಪ್ರೊ.ಉಷಾ ನಾಯಕ್ ಹೇಳಿದರು.
ಅವರು ಕುಕ್ಕುಂದೂರು ಕೆ. ಎಂ. ಇ. ಎಸ್. ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಗುರಿ ತಲುಪಿಸುವವರೇ ಶಿಕ್ಷಕರು. ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಗುರುವಿನ ಶ್ರಮ ಇದ್ದೇ ಇರುತ್ತದೆ. ಶಿಕ್ಷಕರು ಪ್ರಗತಿಶೀಲ ಸಮಾಜದ ಆಧಾರ ಸ್ತಂಭಗಳು ಎಂದು ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ,ಹಾಗೂ ಬೈಲೂರು ರೂರಲ್ ಹೆಲ್ತ್ ಸೆಂಟರ್ ದಂತ ವೈದ್ಯರಾದ ರೀನಾ ಜನೆಟ್ ತಮ್ಮ ಅತಿಥಿ ಭಾಷಣದಲ್ಲಿ ಹೇಳಿದರು.
ಕೆ. ಎಂ. ಇ. ಎಸ್. ಶಿಕ್ಷಣ ಸಂಸ್ಥೆಯಅಧ್ಯಕ್ಷರಾದ ಕೆ.ಎಸ್.ಇಮ್ತಿಯಾಜ್ ಅಹಮದ್ ಮಾತನಾಡಿ ನಿರಂತರ ಅಧ್ಯಯನದಿಂದ ಯಶಸ್ಸಿನ ದಾರಿ ಸುಗಮ ವಾಗುತ್ತದೆ. ಸಂಸ್ಥೆಯು ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ಪ್ರಾಂಶುಪಾಲರಾದ ರಾಮಚಂದ್ರ ನೆಲ್ಲಿಕಾರ್ ಪ್ರಾಸ್ತವಿಕವಾಗಿ ಮಾತನಾಡಿ ‘ಈ ಯಶಸ್ಸು ನಿಮ್ಮ ಮುಂದಿನ ಗುರಿ ತಲುಪಲು ಸೇತುವೆಯಾಗಲಿ. ಇನ್ನಷ್ಟು ಸಾಧನೆಯ ಗರಿ ಮುಡಿಗೇರಲಿ’ ಎಂದು ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಎಸ್.ಎಸ್. ಎಲ್. ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉಪನ್ಯಾಸಕಿ ಪೂಜಾಶ್ರೀ ನಿರೂಪಿಸಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಲೊಲಿಟಾ ಡಿಸಿಲ್ವಾ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಪಾಟ್ಕಾರ್ ಧನ್ಯವಾದವಿತ್ತರು.