ರಾಷ್ಟ್ರೀಯ ಮತದಾರರ ದಿನಾಚರಣೆ: ಉಡುಪಿ ಜಿಲ್ಲಾ ರಾಯಭಾರಿಯಾಗಿ ರೋಹಿತ್ ಕುಮಾರ್ ಕಟೀಲ್ ನೇಮಕ

ಕಾರ್ಕಳ, ಜ.24: 14ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಉಡುಪಿ ಜಿಲ್ಲಾ ರಾಯಭಾರಿಯಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅಂತಾರಾಷ್ಟ್ರೀಯ ಕ್ರೀಡಾಪಟು, ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ರಾಷ್ಟ್ರೀಯ ನಿರ್ದೇಶಕ ಕಾರ್ಕಳದ ರೋಹಿತ್ ಕುಮಾರ್ ಕಟೀಲ್ ನೇಮಕಗೊಂಡಿದ್ದಾರೆ.
14ನೇ ರಾಷ್ಟ್ರೀಯ ಮತದಾರರ ದಿನಾಚರಣೆ 'ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ' ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಲಿದೆ. ಇದರ ಜಿಲ್ಲಾ ರಾಯಭಾರಿಯಾಗಿ ರೋಹಿತ್ ಕುಮಾರ್ ರನ್ನು ನೇಮಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಆದೇಶಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story