ಬುದ್ಧನಜೆಡ್ಡು: ಭೀಮ ಕೋರೆಗಾಂವ್ ಮೂಲನಿವಾಸಿಯರ ವಿಜಯ ದಿನೋತ್ಸವ
ಕುಂದಾಪುರ, ಜ.1: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮ ಘರ್ಜನೆ) ವತಿಯಿಂದ ಭೀಮ ಕೋರೆಗಾಂವ್ ಮೂಲನಿವಾಸಿಯರ ವಿಜಯ ದಿನೋತ್ಸವವನ್ನು ಕರ್ಕುಂಜೆ ಬುದ್ಧನಜೆಡ್ಡುವಿನಲ್ಲಿ ಸೋಮವಾರ ಆಚರಿಸಲಾಯಿತು.
ಬೌದ್ಧ ಉಪಸಕರಾದ ಶಂಭು ಮಾಸ್ಟರ್, ಚೆನ್ನಬಸವಯ್ಯ, ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ಸಂಸ್ಥಾಪಕ ಅಧ್ಯಕ್ಷ ಉದಯ್ ಕುಮಾರ್ ತಲ್ಲೂರು ಮೊಂಬತ್ತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೋರೆಗಾಂವ್ ವಿಜಯ್ ದ್ಯೋತಕವಾಗಿ ಅಲ್ಲಿ ನಿರ್ಮಿಸಲಾದ ವಿಜಯ ಸ್ತಂಭಕ್ಕೆ ನಿವೃತ್ತ ಶಿಕ್ಷಣಾಧಿಕಾರಿ ಭಾಸ್ಕರ ಶೆಟ್ಟಿ ಮಾಲಾರ್ಪಣೆಗೈದರು. ಬೌದ್ಧ ಉಪಸಕರು ಬುದ್ಧ ಉಪಸನೆಗೈದರು. ಅಕಾಲಿಕ ಮರಣ ಹೊಂದಿದ ಭೀಮ ಘರ್ಜನೆಯ ಮಹಿಳಾ ಹೋರಾಟಗಾರ್ತಿ ಕೃಷ್ಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ದಸಂಸ ಭೀಮ ಘರ್ಜನೆಯ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್, ಜಿಲ್ಲಾ ಸಂಘಟನಾ ಸಂಚಾಲಕ ರಾಘು ಶಿರೂರು, ಮುಖಂಡರಾದ ಸಂಜೀವ ಪಳ್ಳಿ, ಮಂಜುನಾಥ ಗುಡ್ಡೆಯಂಗಡಿ, ಚಂದ್ರಮ ತಲ್ಲೂರು, ಸುರೇಂದ್ರ ಬಜಗೋಳಿ, ಹರೀಶ್ ಪರ್ಪಾಡಿ, ಸುಧಾಕರ್ ಸೊರ್ಗೊಳಿ, ಸತೀಶ್ ಸೊರ್ಗೋಳಿ, ರಾಮ ಬೆಳ್ಳಾಲ, ಅಶೋಕ ಕರ್ಕುಂಜೆ, ಸಂಜೀವ ಕೊಡ್ಲಾಡಿ, ಗಣೇಶ್ ಆಜ್ರಿ, ಮಂಜುನಾಥ ಆಜ್ರಿ, ಚಂದ್ರಪ್ರಕಾಶ್ ಆಜ್ರಿ, ಸಂತೋಷ್ ಕತ್ಗೋಡು, ಉದಯ್ ಕತ್ಗೋಡು, ಅರುಣ್ ಕೊಡ್ಲಾಡಿ, ಉಷಾ ಕತ್ಗೋಡು, ಗುಲಾಬಿ ಕೊರ್ಗಿ, ದುರ್ಗಿನಕ್ರೆ, ಚಂದ್ರಿಕಾ ಬೆಳ್ಳಾಲ, ರಾಧಿಕಾ ಬೆಳ್ಳಾಲ, ನಾಗೇಶ್ ಪೂಜಾರಿ ಬುದ್ಧನಜೆಡ್ಡು, ಸತ್ಯನಾರಾಯಣ ಬೆಳ್ಳಾಲ, ಸಂದೇಶ್ ಬ್ರಹ್ಮಾವರ, ರಂಜಿತ್ ಬ್ರಹ್ಮಾವರ, ರಾಹುಲ್ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು.