ಉಡುಪಿ ಕಿಸಾನ್ ಕಾಂಗ್ರೆಸ್ನಿಂದ ಸಾಧಕ ಕೃಷಿ ಕಾರ್ಮಿಕರಿಗೆ ಸನ್ಮಾನ
ಉಡುಪಿ, ಅ.3: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಲಾಲಲ್ ಬಹದ್ದೂರ್ ಶಾಸ್ತ್ರಿ ಹಾಗೂ ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಬುಧವಾರ ಉಡುಪಿ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಅಡಿಕೆಗೆ ಮದ್ದು ಸಿಂಪಡಿಸುವ ಕೃಷಿ ಕಾರ್ಮಿಕ ಹೆಬ್ರಿ ಕುಚ್ಚೂರಿನ ಕೃಷ್ಣ ನಾಯ್ಕ್ ಹಾಗೂ ತೆಂಗಿನ ಕಾಯಿ ಕೋಯುವ ಕೃಷಿ ಕಾರ್ಮಿಕ ಎಲ್ಲೂರು ಗ್ರಾಮದ ಅಶೋಕ್ ಪೂಜಾರಿ ಉಳ್ಳೂರು ಅವರನ್ನು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸನ್ಮಾನಿಸಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುಖಂಡರಾದ ಪ್ರಸಾದ್ರಾಜ್ ಕಾಂಚನ್, ಗೀತಾ ವಾಗ್ಳೆ, ಚಂದ್ರಿಕಾ ಶೆಟ್ಟಿ, ಕಿಸಾನ್ ರಾಜ್ಯ ಕಾರ್ಯದರ್ಶಿಗಳಾದ ಉದಯ ಶೆಟ್ಟಿ, ರಾಯ್ಸ್ ಮಾರ್ವಿನ್ ಫೆರ್ನಾಂಡೀಸ್, ದಿನೇಶ್ ಶಂಕರಪುರ, ಜಿಲ್ಲಾ ಕಾರ್ಯದರ್ಶಿ ಉದಯ ಹೇರೂರ, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ಹರೀಶ್ ಶೆಟ್ಟಿ ಕೀಳಿಂಜೆ, ಕುಂದಾಪುರ ಬ್ಲಾಕ್ ಅಧ್ಯಕ್ಷ ರತ್ನಾಕರ ಶೆಟ್ಟಿ ಕಾಳವಾರ, ಕೋಟ ಅಧ್ಯಕ್ಷ ರವೀಂದ್ರ ಐತಾಳ್, ಹೆಬ್ರಿ ಅಧ್ಯಕ್ಷ ಸುಂದರ್ ಶೆಟ್ಟಿಗಾರ್, ಕುರ್ಕಾಲು ಗ್ರಾಮ ಅಧ್ಯಕ್ಷ ಸೋಮಯ್ಯ ಕಾಂಚನ್, ಹರೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ವಂಡ್ಸೆ ಕಿಸಾನ್ ಅಧ್ಯಕ್ಷ ಗೋವರ್ಧನ್ ಜೋಗಿ ಗಾಂಧಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ ಎಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಶೇಖರ್ ಕೋಟ್ಯಾನ್ ವಂದಿಸಿದರು. ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.