ಗಂಗೊಳ್ಳಿ ಅಂಚೆ ಕಚೇರಿಯಲ್ಲಿ ಕಳವು
ಗಂಗೊಳ್ಳಿ, ಅ.14: ಗಂಗೊಳ್ಳಿಯ ಅಂಚೆ ಕಚೇರಿಗೆ ನುಗ್ಗಿದ ಕಳ್ಳರು ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಅ.10ರ ಸಂಜೆಯಿಂದ ಅ.14ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಅಂಚೆ ಕಚೇರಿ ಕೋಣೆಯ ಬಲಭಾಗದ ಕಿಟಕಿಯ 3 ಕಂಬಿಯನ್ನು ಕತ್ತರಿಸಿ ಬಾಗಿಸಿ ಒಳ ಪ್ರವೇಶಿಸಿದ ಕಳ್ಳರು, ಡ್ರವರ್ನಲ್ಲಿದ್ದ 2125ರೂ. ಕಳ್ಳತನ ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story