ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಯ ರಕ್ಷಣೆ
ಕಾರ್ಕಳ: ತಾಯಿಯಿಂದ ಬೇರ್ಪಟ್ಟು ಅಸಹಾಯಕ ಸ್ಥಿತಿಯಲ್ಲಿದ್ದ ಚಿರತೆ ಮರಿಯನ್ನು ಅರಣ್ಯ ಇಲಾಖೆ ರಕ್ಷಿಸಿರುವ ಘಟನೆ ಮಂಗಳವಾರ ಕಲ್ಯಾ ಗ್ರಾಮದಲ್ಲಿ ನಡೆದಿದೆ.
ಕಲ್ಯ ಗ್ರಾಮದ ಪಡುಮನೆ ಲಕ್ಷ್ಮಣ ಶೆಟ್ಟಿ ಎಂಬವರ ಜಾಗದಲ್ಲಿರುವ ಗುಳಿಗ ದೈವದ ಗುಡಿಯ ಸಮೀಪ ಎರಡು ತಿಂಗಳು ಪ್ರಾಯದ ಹೆಣ್ಣು ಚಿರತೆ ಮರಿ ಕಂಡು ಬಂದಿದ್ದು, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಘುಪತಿ ಪೂಜಾರಿ ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದರು.
ಸ್ಥಳಕ್ಕೆ ಆಗಮಿಸಿದ ಬೆಳ್ಮಣ್ ಉಪ ವಲಯ ಅರಣ್ಯಾಧಿಕಾರಿ ಉಕ್ರಪ್ಪ ಗೌಡ, ಗಸ್ತು ಅರಣ್ಯ ಪಾಲಕರಾದ ಸುರೇಶ್, ಪ್ರಕಾಶ್, ಚಿರತೆಯನ್ನು ರಕ್ಷಿಸಿದರು. ಬಳಿಕ ಮರಿಯನ್ನು ಬೋನಿನಲ್ಲಿ ಹಾಕಿ ಸುರಕ್ಷಿತವಾಗಿ ಮಂಗಳೂರಿನ ಪಿಳಿಕುಳ ನಿಸರ್ಗ ಧಾಮಕ್ಕೆ ಒಪ್ಪಿಸಲಾಯಿತು.
Next Story