ಉಡುಪಿ: ಪಾರ್ಟ್ಟೈಮ್ ಜಾಬ್ ಹೆಸರಿನಲ್ಲಿ ವಂಚನೆ
ಉಡುಪಿ, ನ.13: ಪಾರ್ಟ್ಟೈಮ್ ಜಾಬ್ ಹೆಸರಿನಲ್ಲಿ ಲಕ್ಷಾಂತರ ರೂ. ಆನ್ಲೈನ್ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರ್ಚನಾ(25) ಎಂಬವರು ಪಾರ್ಟ್ಟೈಮ್ ಜಾಬ್ ಬಗ್ಗೆ ಲಿಂಕ್ ಕ್ಲಿಕ್ ಮಾಡಿದ್ದು ಆ ವೇಳೆ ಅವರಿಗೆ ಪಾರ್ಟ್ಟೈಮ್ ಜಾಬ್ ಬಗ್ಗೆ ಸಂದೇಶಗಳು ಬಂದಿತ್ತು. ಟಾಸ್ಕ್ ನಡೆಸಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂಬುದಾಗಿ ನಂಬಿಸಿ, ಅರ್ಚನಾ ಅವರಿಂದ ಅ.18ರಿಂದ ಅ.24ರ ತನಕ ಹಂತ ಹಂತವಾಗಿ ಒಟ್ಟು 1,94,529ರೂ. ಹಣವನ್ನು ವರ್ಗಾಯಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story