ಕೃತಕ ಆಭರಣ ತಯಾರಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಮಣಿಪಾಲ, ನ.14: ಮಣಿಪಾಲ ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ)ನಲ್ಲಿ 18ರಿಂದ 45 ವರ್ಷ ವಯೋಮಿತಿಯ ಸ್ವ-ಉದ್ಯೋಗ ಮಾಡ ಬಯಸುವ ಮಹಿಳೆಯರು/ಯುವತಿಯರಿಗೆ 10 ದಿನಗಳ ಉಚಿತ ಕೃತಕ ಆಭರಣಗಳು (ಅರ್ಟಿಫೀಶೀಯಲ್ ಜ್ಯುವೆಲ್ಲರಿ) ಮತ್ತು ಅಲಂಕಾರಿಕ ಕರಕುಶಲ ವಸ್ತುಗಳ ತಯಾರಿ ತರಬೇತಿಯನ್ನು ಬಿವಿಟಿ ಹಮ್ಮಿಕೊಂಡಿದೆ.
ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲಾಗುವ ತರಬೇತಿಯ ವೇಳೆ ತರಬೇತಿಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಒದಗಿಸಲಾ ಗುವುದು. ಆಸಕ್ತ ಅಭ್ಯರ್ಥಿಗಳು ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಿದ್ಯಾರ್ಹತೆಯನ್ನು ಬಿಳಿಹಾಳೆಯಲ್ಲಿ ಬರೆದು ನ.20 ರೊಳಗೆ ಭಾರತೀಯ ವಿಕಾಸ ಟ್ರಸ್ಟ್ ’ಅನಂತ’ ಮಣಿಪಾಲ-ಅಂಬಾಗಿಲು ರಸ್ತೆ, ಪೆರಂಪಳ್ಳಿ, ಮಣಿಪಾಲ - 576102 ಇಲ್ಲಿಗೆ ಕಳುಹಿಸಿಕೊಡಬಹುದು.
ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ:0820-2570263ನ್ನು ಸಂಪರ್ಕಿಕಿಸಬಹುದು.ಮೊದಲು ನೊಂದಾಯಿಸಿ ಕೊಂಡವರಿಗೆ ಆದ್ಯತೆ ನೀಡಲಾಗುವುದು ಎಂದು ಬಿವಿಟಿ ಸಂಸ್ಥೆ ಪ್ರಕಟನೆ ತಿಳಿಸಿದೆ.
Next Story