ಕೆರೆಗೆ ಬಿದ್ದು ವಿದ್ಯಾರ್ಥಿನಿ ಮೃತ್ಯು
ಕೋಟ, ನ.19: ರಜಾದಿನವಾದ ರವಿವಾರ ನ.17ರಂದು ಅಪರಾಹ್ನ ತೆಂಗಿನತೋಟದಲ್ಲಿರುವ ತೆಂಗಿನ ಕಾಯಿ ಹೆಕ್ಕಿ ತರುವುದಾಗಿ ತೋಟಕ್ಕೆ ಹೋದ ಮಂದಾರ್ತಿಯಲ್ಲಿ ಪ್ರಥಮ ಪಿಯುಸಿ ಓದುತಿದ್ದ ನಂಚಾರಿನ ಸುರೇಂದ್ರ ಎಂಬವರ ಮಗಳು ಶೃತಿ (16) ಮನೆಯ ತೋಟದ ಆವರಣವಿಲ್ಲದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಸಂಜೆಯಾದರೂ ತೋಟದಿಂದ ಬಾರದ ಕಾರಣ ಎಲ್ಲಾ ಕಡೆ ಹುಡುಕಾಡಿದ್ದರೂ ಮರುದಿನ ಬೆಳಗ್ಗೆ ಕೆರೆಯ ತಳಭಾಗದಲ್ಲಿ ಮೃತದೇಹ ಕಂಡುಬಂದಿತ್ತು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story