ಗ್ರಾಪಂ ಚುನಾವಣೆ: ಮೀಸಲಾತಿ ಪ್ರಕಟ
ಉಡುಪಿ, ನ.20:1993ರ ಕರ್ನಾಟಕ ಪಂಚಾಯತ್ ರಾಜ್ ಅಧಿ ನಿಯಮ ಉಪಬಂಧಗಳ ಮೇರೆಗೆ ಜಿಲ್ಲೆಗೆ ಸಂಬಂಧಿಸಿ ದಂತೆ 2023ರ ಡಿಸೆಂಬರ್ ತಿಂಗಳಿನಿಂದ 2025ರ ಜನವರಿ ತಿಂಗಳವರೆಗೆ ಅವಧಿ ಮುಕ್ತಾಯ ವಾಗುತ್ತಿರುವ ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿ ಯಮ 1993ರ ಪ್ರಕರಣ 308 ಎಎ ಮತ್ತು 308 ಎಬಿರನ್ವಯ ಚುನಾವಣಾ ವೇಳಾಪಟ್ಟಿಯನ್ನು ಮತ್ತು ಮೀಸಲಾತಿ ಯನ್ನು ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ನವೆಂಬರ್ 21 ರಂದು ಹೊರಡಿಸಲಿದ್ದು, ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 27 ಕೊನೆಯ ದಿನ, ನವೆಂಬರ್ 28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ನವೆಂಬರ್ 30 ಕೊನೆಯ ದಿನವಾಗಿದ್ದು, ಡಿಸೆಂಬರ್ 8ರಂದು ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಮತಗಳ ಎಣಿಕೆ ಕಾರ್ಯ ಡಿಸೆಂಬರ್ 11 ರಂದು ಬೆಳಗ್ಗೆ 8ರಿಂದ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಮೀಸಲಾತಿ ವಿವರ: ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಪಂನ ಗಂಗೊಳ್ಳಿ-1 ಗ್ರಾಪಂ ಕ್ಷೇತ್ರದ ಒಟ್ಟು 5 ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ ಮಹಿಳೆ (1), ಸಾಮಾನ್ಯ (2) ಹಾಗೂ ಸಾಮಾನ್ಯ ಮಹಿಳೆ (2), ಗಂಗೊಳ್ಳಿ-2 ಗ್ರಾಪಂ ಕ್ಷೇತ್ರದ ಒಟ್ಟು 4 ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ(2), ಸಾಮಾನ್ಯ (1) ಹಾಗೂ ಸಾಮಾನ್ಯ ಮಹಿಳೆ (1), ಗಂಗೊಳ್ಳಿ-3 ಗ್ರಾಪಂ ಕ್ಷೇತ್ರದ ಒಟ್ಟು 4 ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ (1), ಹಿಂದುಳಿದ ವರ್ಗ ಅ ಮಹಿಳೆ (1), ಹಿಂದುಳಿದ ವರ್ಗ ಬ ಮಹಿಳೆ (1) ಹಾಗೂ ಸಾಮಾನ್ಯ (1), ಗಂಗೊಳ್ಳಿ-4 ಗ್ರಾಪಂ ಕ್ಷೇತ್ರದ ಒಟ್ಟು 4 ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ (1), ಹಿಂದುಳಿದ ವರ್ಗ ಅ (1) ಹಾಗೂ ಸಾಮಾನ್ಯ ಮಹಿಳೆ (2), ಗಂಗೊಳ್ಳಿ-5 ಗ್ರಾಪಂ ಕ್ಷೇತ್ರದ ಒಟ್ಟು 4 ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ ಮಹಿಳೆ (1), ಸಾಮಾನ್ಯ (2) ಹಾಗೂ ಸಾಮಾನ್ಯ ಮಹಿಳೆ (1), ಗಂಗೊಳ್ಳಿ-6 ಗ್ರಾಪಂ ಕ್ಷೇತ್ರದ ಒಟ್ಟು 5 ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ ಮಹಿಳೆ (1), ಹಿಂದುಳಿದ ವರ್ಗ ಬ (1), ಸಾಮಾನ್ಯ (1) ಹಾಗೂ ಸಾಮಾನ್ಯ ಮಹಿಳೆ (2), ಗಂಗೊಳ್ಳಿ-7 ಗ್ರಾಪಂ ಕ್ಷೇತ್ರದ ಒಟ್ಟು 3 ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ (1) ಹಾಗೂ ಸಾಮಾನ್ಯ (2) ಮತ್ತು ಗಂಗೊಳ್ಳಿ-8 ಗ್ರಾಪಂ ಕ್ಷೇತ್ರದ ಒಟ್ಟು 4 ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ (1), ಹಿಂದುಳಿದ ವರ್ಗ ಅ (1), ಸಾಮಾನ್ಯ (1) ಹಾಗೂ ಸಾಮಾನ್ಯ ಮಹಿಳೆ (1) ಮೀಸಲಾತಿ ನಿಗದಿ ಪಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.