ಆದಿಉಡುಪಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಶಾಲಾ ಮಕ್ಕಳ ರಕ್ಷಣೆಗೆ ತುರ್ತು ಕ್ರಮಕ್ಕೆ ಆಗ್ರಹ
ಉಡುಪಿ: ಮಲ್ಪೆರಾಷ್ಟ್ರೀಯ ಹೆದ್ದಾರಿಯ ಆದಿಉಡುಪಿ ಪರಿಸರ ದಲ್ಲಿ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದು ಇಲ್ಲಿ ಶಾಲೆ ಬಿಡುವ ಸಂದರ್ಭ ಮಕ್ಕಳ ರಕ್ಷಣೆ ಮತ್ತು ಒಳಿತಿಗಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಮೂಲಕ ಮಕ್ಕಳ ಸುರಕ್ಷತೆ ಕಾಪಾಡಲು ಸಹಕರಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಆಗ್ರಹಿಸಿದ್ದಾರೆ.
ದ್ವಿಮುಖ ವಾಹನಗಳು ರಸ್ತೆಯ ಒಂದೇ ಪಕ್ಕದಲ್ಲಿ ಚಲಿಸುತ್ತಿದ್ದು, ಆದಿಉಡುಪಿ ಶಾಲಾ ಮಕ್ಕಳು ಶಾಲೆ ಬಿಟ್ಟ ಸಮಯದಲ್ಲಿ ಬಸ್ಸುಗಳಿಗೆ ಕಾಯುವಾಗ ಹಾಗೂ ರಸ್ತೆ ದಾಟುವಾಗ ಬಹಳ ಆತಂಕಕಾರಿ ಹಾಗೂ ಭಯದ ವಾತಾವರಣ ನಿರ್ಮಾಣ ವಾಗಿದೆ. ಈಗಾಗಲೇ ಕೂದಲೆಳೆ ಅಂತರದಲ್ಲಿ ದುರಂತ ತಪ್ಪಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮಕ್ಕಳ ರಕ್ಷಣೆ ವಿಚಾರದಲ್ಲಿ ತುರ್ತು ಅಗತ್ಯ ಕ್ರಮಗಳನ್ನು ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Next Story