ಡಿ.ಆರ್.ರಾಜು ಉದಾರ ಚರಿತ್ರೆಯ ಅಪರೂಪದ ಕರ್ಮಜೀವಿ: ವೀರಪ್ಪ ಮೊಯ್ಲಿ
ಕಾರ್ಕಳ, ನ.24: ಕಾಂಗ್ರೆಸ್ ಮುಖಂಡ ಡಿ.ಆರ್.ರಾಜು ಒಬ್ಬ ಉದಾರ ಚರಿತ್ರೆಯ ಅಪರೂಪದ ಕರ್ಮಜೀವಿ. ಅವರು ತಮ್ಮ ಬದುಕಿನಲ್ಲಿ ಪ್ರತಿಪಾದಿಸಿ ಕೊಂಡು ಬಂದ ಸಮಾಜಮುಖೀ ಕೆಲಸಗಳ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಬದ್ಧತೆಯಾಗಿದೆ ಎಂದು ಮಾಜಿ ಮುಖ್ಯ ಡಾ.ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.
ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಇತ್ತೀಚೆಗೆ ನಿಧನರಾದ ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಡಿ.ಆರ್.ರಾಜುರವರ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು.
ದಿ.ರಾಜುರವರು ಕಾಂಗ್ರೆಸ್ ಪಕ್ಷದ ಒಬ್ಬ ಅತಿ ನಿಷ್ಠಾವಂತ ಕರ್ತವ್ಯ ನಿಷ್ಟ ಜನಪರ ಚಿಂತನೆಯ ಕಾರ್ಯಸಾಧಕ ನಾಯಕ ರಾಗಿದ್ದರು. ಕಾಂಗ್ರೆಸ್ ಪ್ರತಿಪಾದಿಸಿಕೊಂಡು ಬಂದ ಶಾಂತಿ ಸೌಹಾರ್ದತೆ ಅವರ ಬದುಕಿನ ಜೀವಾಳ ವಾಗಿತ್ತು. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಹಿರಿಯ ನಾಯಕ ಉದಯ್ ಶೆಟ್ಟಿ ಮಾತನಾಡಿ, ರಾಜುರವರು ಸಮಾಜದ ಸರ್ವಾಂಗೀಣ ಚಿಂತೆನೆ ಉಳ್ಳವರು ಸಮಾಜದ ಸರ್ವ ವ್ಯಕ್ತಿಗಳನ್ನು ಹೊಂದಿಕೊಂಡ ಜೀವನ ಸಾಧನೆ ಮಾಡಿದವರು. ಕೊರೋನಾ ಕಷ್ಟ ಕಾಲದ ಸಂದರ್ಭದಲ್ಲಿ ಅವರು ಮಾಡಿದ ಜನಸೇವೆ ಅವಿಸ್ಮರಣೀಯ. ಅವರ ಅಗಲಿಕೆ ನನಗೆ ಪಕ್ಷ ಸಂಘಟನೆಯ ವಿಚಾರವಾಗಿಯೂ ಅಪಾರ ನಷ್ಟ ಉಂಟು ಮಾಡಿದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುದ್ರಾಡಿ ಮಂಜುನಾಥ ಪೂಜಾರಿ, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಹಿರಿಯ ನ್ಯಾಯವಾದಿ ಶೇಖರ ಮಡಿವಾಳ, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ನುಡಿ ನಮನ ಸಲ್ಲಿಸಿದರು.
ಕಾರ್ಕಳ ಬ್ಲಾಕ್ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್, ನಿಕಟ ಪೂರ್ವ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಉಪಾಧ್ಯಕ್ಷ ಸುಧಾಕರ್ ಕೋಟ್ಯಾನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅದ್ಯಕ್ಷ ಅಜಿತ್ ಹೆಗಡೆ, ಶೃಂಗೇರಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ನಾಗರಾಜ್, ಬ್ಲಾಕ್ ಸಮಿತಿಯ ಪದಾಧಿಕಾರಿಗಳು ವಿವಿದ ಘಟಕಗಳ ಅದ್ಯಕ್ಷರುಗಳು, ಗ್ರಾಮೀಣ ಸಮಿತಿಯ ಅದ್ಯಕ್ಷರುಗಳು ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.