ಮಹಿಳೆಯ ಚಿನ್ನದ ಸರ ಸುಲಿಗೆ
ಕಾರ್ಕಳ, ಡಿ.3: ಕಾಂತಾವರ ಗ್ರಾಮದ ಅಂಬರೀಶ ಗುಹೆ ಸಮೀಪ ಬಾರಾಡಿ-ಕಾಂತವರಕ್ಕೆ ಹೋಗುವ ರಸ್ತೆಯಲ್ಲಿ ಡಿ.2ರಂದು ಬೆಳಗ್ಗೆ ನಡೆದು ಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅರಪರಿಚಿತ ಸುಲಿಗೆ ಮಾಡಿರುವ ಬಗ್ಗೆ ವರದಿಯಾಗಿದೆ.
ಕಾಂತಾವರದ ಗೋಪಿ(66) ಎಂಬವರು ಕಾಂತೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿ, ವಾಪಾಸ್ಸು ಮನೆಗೆ ನಡೆದು ಕೊಂಡು ಹೋಗುತ್ತಿದ್ದಾಗ ಬಾರಾಡಿ ಕಡೆಯಿಂದ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ, ಗೋಪಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದು ಪರಾರಿ ಯಾದನು. ಕಳವಾದ ಚಿನ್ನದ ಮೌಲ್ಯ 1,20,000ರೂ. ಎಂದು ಅಂದಾಜಿಸ ಲಾಗಿದೆ. ಈ ವೇಳೆ ಅಪರಿಚಿತ ತಳ್ಳಿದ ಪರಿಣಾಮ ಗೋಪಿ ಗಾಯ ಗೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story