ಬಂಡೆ ಒಡೆಯಲು ಅಕ್ರಮ ಸ್ಪೋಟಕ ಬಳಕೆ ಆರೋಪ: ಪ್ರಕರಣ ದಾಖಲು
ಬ್ರಹ್ಮಾವರ, ಡಿ.14: ನೀಲಾವರ ಗ್ರಾಮದ ಕೆಳಕುಂಜಾಲು ಎಂಬಲ್ಲಿ ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಕಲ್ಲು ಬಂಡೆ ಗಳನ್ನು ಒಡೆಯುತ್ತಿದ್ದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.13ರಂದು ಸಂಜೆ ವೇಳೆ ಬ್ರಹ್ಮಾವರ ಪೊಲೀಸರು, ರಿಚರ್ಡ್ ರೋಡ್ರಿಗಸ್ ಎಂಬವರಿಗೆ ಸಂಬಂಧಿಸಿದ ನಿವೇಶನಕ್ಕೆ ದಾಳಿ ನಡೆಸಿದ್ದು, ಇವರು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಬಂಡೆಕಲ್ಲುಗಳನ್ನು ಕಂಪ್ರೆಸರ್ ಮತ್ತು ಸ್ಪೋಟಕ ವಸ್ತು ಗಳನ್ನು ಬಳಸಿ ಒಡೆದಿರುವುದು ಕಂಡುಬಂದಿದೆ. ಅಲ್ಲದೆ ಸ್ಪೋಟಕ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡು ಕಾನೂನು ಬಾಹಿರ ಕೃತ್ಯ ಎಸಗಿರುವುದಾಗಿ ದೂರಲಾಗಿದೆ. ತೆ ಪ್ರಕರಣ ದಾಖಲಾಗಿರುತ್ತದೆ.
Next Story