ಬೆಂಗಳೂರಿನ ಚೆಸ್ ಪಂದ್ಯಾಟ: ಉಡುಪಿಯ ಚಿನ್ಮಯ್ಗೆ ಪ್ರಶಸ್ತಿ
ಉಡುಪಿ: ಚೆಸ್ ನೈಟ್ಸ್ ವತಿಯಿಂದ ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ನಡೆದ ಚದುರಂಗೋತ್ಸವ: ಅಖಿಲ ಭಾರತ 1,800ಕ್ಕಿಂತ ಕಡಿಮೆಯಿರುವ ಫಿಡೆ ಶ್ರೇಯಾಂಕಿತರ ಚೆಸ್ ಪಂದ್ಯಾಟದಲ್ಲಿ ಉಡುಪಿಯ ಚಿನ್ಮಯ್ ಎಸ್.ಭಟ್ ಅಗ್ರಪ್ರಶಸ್ತಿಯನ್ನು ಗೆದ್ದು ಕೊಂಡಿದ್ದಾರೆ.
ಒಟ್ಟು 9 ಸುತ್ತುಗಳ ಈ ಪಂದ್ಯಾಟದಲ್ಲಿ ಚಿನ್ಮಯ್ ಅವರು ಏಳು ಅಂಕ ಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನ ಪಡೆದರು. ಇವರು ಮಣಿಪಾಲ ಎಂಐಟಿಯ ಐಟಿ ವಿಭಾಗದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದಾರೆ.
Next Story