ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕಾರ್ಕಳ ರಾಕ್ ಸಿಟಿ ಉದ್ಘಾಟನೆ, ಪದಪ್ರಧಾನ ಕಾರ್ಯಕ್ರಮ
ಕಾರ್ಕಳ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕಾರ್ಕಳ ರಾಕ್ ಸಿಟಿಯ ಉದ್ಘಾಟನೆ ಶಿರಿಡಿ ಸಾಯಿ ಮಂದಿರದಲ್ಲಿ ನೆರವೇರಿತು. ರಾಷ್ಟ್ರೀಯ ಅಧ್ಯಕ್ಷರಾದ ಸೀನಿಯರ್ ಚಿತ್ರ ಕುಮಾರ್ ನೂತನ ಘಟಕದ ಉದ್ಘಾಟನೆ ನೆರವೇರಿಸಿದರು
ಸಮಾರಂಭದಲ್ಲಿ ನೂತನ ಘಟಕ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷರಾಗಿ ಸುಧಾಕರ್ ಪೂಜಾರಿ ಕಾರ್ಕಳ, ಉಪಾಧ್ಯಕ್ಷರಾಗಿ ಅನಿಲ ಪೂಜಾರಿ ಮಾಳ ಮತ್ತು ಹರೀಶ್ ಅಮೀನ್ ನಲ್ಲೂರು, ಕಾರ್ಯದರ್ಶಿಯಾಗಿ ವೇಲೇರಿಯನ್ ಲೋಬೊ, ಕೋಶಾಧಿಕಾರಿಯಾಗಿ ಅತಿಕ್ M, ಜೊತೆ ಕಾರ್ಯದರ್ಶಿಯಾಗಿ ಮೋಹನ್ ನಕ್ರೆ, ನಿರ್ದೇಶಕರಾಗಿ ಸುನಿಲ್ ಕೋಟ್ಯಾನ್, ವನಿತಾ ಕೋಟ್ಯಾನ್, ಶಾಲಿನಿ ರವಿ ಸುವರ್ಣ, ಸದಸ್ಯರಾಗಿ ಲತಾ ಸುವರ್ಣ, ಡಯಾಸ್ ಚರಿಯನ್, ಶಂಕರ್ ದೇವಾಡಿಗ, ಪ್ರಕಾಶ್ ಪೂಜಾರಿ ಕೇರ್ವಾಸೆ, ದಿನೇಶ್ ಕೆ, ಸತೀಶ ಕರ್ಕೇರ ತೆಳ್ಳರ್, ಮಮತಾ ರಾಜು ಮತ್ತು ಸಂತೋಷ್ ಕುಲಾಲರಿಗೆ ರಾಷ್ಟ್ರೀಯ ಉಪಾಧ್ಯಕ್ಷರಾದ ಸೀನಿಯರ್ ಪುಷ್ಪರವರು ಪ್ರಮಾಣ ವಚನ ಬೋಧನೆ ನೆರವೇರಿಸಿದರು.
ಕನಸಿನ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ, ಈ ವರುಷದ ಘಟಕದ ಕನಸಿನ ಯೋಜನೆಯಾದ ಮಧ್ಯ ಮುಕ್ತ ಮೆಹಂದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಯೋಜನೆಯಡಿ, ಕಾರ್ಕಳ ತಾಲೂಕಿನ ಯಾವ ವಧುವಿನ ಮನೆಯಲ್ಲಿ ಮಧ್ಯ ಮುಕ್ತ ಮೆಹಂದಿ ಕಾರ್ಯಕ್ರಮ ನಡೆಸಲಾಗುವುದೋ ಆ ಮನೆಗೆ ರೂ 5000 ರೂಪಾಯಿಯ ಪೋಷಕ ಧನವಾಗಿ ನೀಡುವುದರ ಮೂಲಕ ವಧು ಮತ್ತು ಮನೆಯವರನ್ನು ಗುರುತಿಸಲಾಗುವುದು ಎಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಶ್ರೀ ವಿಜಯ ಶೆಟ್ಟಿ ಯವರು ಘೋಷಣೆ ಮಾಡುವುದರ ಮೂಲಕ, ಈ ಯೋಜನೆಗೆ ಚಾಲನೆ ನೀಡಿದರು.
ಪೋಡಿಯಂ ವಿತರಣೆ
ಶಿರಿಡಿ ಸಾಯಿ ಕಾಲೇಜು, ಕಾರ್ಕಳ ಇಲ್ಲಿಗೆ ಬೈದೆರ್ಲೆ ಹೆರ್ಬಲ್ಸ್ ಕಾರ್ಕಳ ಪ್ರಾಯೋಜಿತ ಪೋಡಿಯಂ ಅನ್ನು ಸಮಾರಂಭದ ಅತಿಥಿ ಸೀನಿಯರ್ ನವೀನ್ ಅಮೀನ್ ರವರು ವಿತರಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಸೀನಿಯರ್ ಜಗದೀಶ್ ಕೆಮ್ಮಣ್ಣು, ಸುರೇಖಾ ಮುರಳೀಧರ ಶಿವಮೊಗ್ಗ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಪದ ಪ್ರಧಾನ ಕಾರ್ಯಕ್ರಮದ ವಿಶೇಷತೆ
ಮೊದಲ ಭಾರಿಗೆ ಕರಾವಳಿಯ ಕುಣಿತ ಭಜನೆ ಮೂಲಕ ಪದಾಪ್ರಧಾನ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದ್ದು ಇದನ್ನು ಪ್ರಕಾಶ್ ಕೇರ್ವಾಸೆ ನೇತೃತ್ವದ ಗೋಪಾಲಕ್ರಷ್ಣ ಭಜನಾ ಮಂಡಳಿ ಕೇರ್ವಾಸೆ ಇವರು ನಡೆಸಿ ಕೊಟ್ಟರು ಮತ್ತು ಆ ತಂಡವನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ಉಡುಪಿ ಟೆಂಪಲ್ ಸಿಟಿ ಅಧ್ಯಕ್ಷರಾದ ಸೀನಿಯರ್ ಸಂತೋಷ್ ರವರು ನೀಡಿದರು ಮತ್ತು ಧನ್ಯವಾದವನ್ನು ಜೊತೆ ಕಾರ್ಯದರ್ಶಿ ಸೀನಿಯರ್ ಮೋಹನ್ ನಕ್ರೆ ಯವರು ನೀಡಿದರು.