ಮಿಸ್ಟರ್ ಕರ್ನಾಟಕ- ಮಿಸ್ಟರ್ ಉಡುಪಿ ದೇಹದಾರ್ಡ್ಯ ಸ್ಪರ್ಧೆ
ಉಡುಪಿ, ಡಿ.22: ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ವತಿಯಿಂದ ಮಿಸ್ಟರ್ ಕರ್ನಾಟಕ-2024 ಹಾಗೂ ಮಿಸ್ಟರ್ ಉಡುಪಿ-2024 ದೇಹದಾರ್ಡ್ಯ ಸ್ಪರ್ಧೆಯನ್ನು ಅಂಬಲಪಾಡಿಯ ಶಾಮಿಲಿ ಹಾಲ್ನಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಈ ಸ್ಫರ್ಧೆಯ 55ಕೆ.ಜಿ. ವಿಭಾಗದಲ್ಲಿ ವಜ್ರ ಜಿಮ್ನ ಸದಸ್ಯ ಸಂದೇಶ್ ಕುಮಾರ್ ಕಟಪಾಡಿ ಹಾಗೂ 80 ಕೆ.ಜಿ. ವಿಭಾಗದಲ್ಲಿ ಪವನ್ ಮಿಸ್ಟರ್ ಉಡುಪಿ ಚಿನ್ನದ ಪದಕ, ಮಿಸ್ಟರ್ ಕರ್ನಾಟಕ ಚಿನ್ನದ ಪದಕ ಹಾಗೂ ಮಿಸ್ಟರ್ ಇಂಡಿಯಾದೊಂದಿಗೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.
70ಕೆ.ಜಿ. ವಿಭಾಗದಲ್ಲಿ ಕುಮಾರ್ ಮಿಸ್ಟರ್ ಉಡುಪಿ ಚಿನ್ನದ ಪದಕ ಹಾಗೂ 85ಕೆ.ಜಿ. ಮೇಲ್ಪಟ್ಟ ವಿಭಾಗದಲ್ಲಿ ಕವನ್ ಕುಮಾರ್ ಮಿಸ್ಟರ್ ಉಡುಪಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಇವರೆಲ್ಲರೂ ಪ್ರಸ್ತುತ ವಜ್ರಾ ಜಿಮ್ ಕಟಪಾಡಿ ಯಲ್ಲಿ ಪ್ರಮೋದ್ ಕೋಟ್ಯಾನ್ ಹಾಗೂ ರಕ್ಷಿತ್ ಕೋಟ್ಯಾನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
Next Story