ವಿಜಯುನಗರ ಮೂಲದ ವಿದ್ಯಾರ್ಥಿ ನಾಪತ್ತೆ
ಉಡುಪಿ, ಡಿ.22: ವಿಜಯ ನಗರ ಜಿಲ್ಲೆಯ ಕೂಡ್ಲುಗಿ ತಾಲೂಕಿನ ಪ್ರಸ್ತುತ ಸಂತೆಕಟ್ಟೆ ಸುಬ್ರಹ್ಮಣ್ಯ ನಗರ ನಿವಾಸಿ 9 ನೇ ತರಗತಿ ವಿದ್ಯಾರ್ಥಿ ಕೆ.ಮಣಿಕಂಠ (15) ಎಂಬವರು ಡಿ.19ರಂದು ನಾಪತ್ತೆಯಾಗಿದ್ದಾರೆ.
ಸಂತೆಕಟ್ಟೆ ಮಿಲಾಗ್ರಿಸ್ ಪ್ರೌಢಶಾಲೆಯ ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಥಿ ಯಾಗಿರುವ ಮಣಿಕಂಠ, ಶಾಲೆಗೆಂದು ಹೋದ ವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಕನ್ನಡ ಭಾಷೆ ಬಲ್ಲವನಾಗಿರುವ ಈತ 4.5 ಅಡಿ ಎತ್ತರ, ಸಾಧಾ ರಣ ಮೈಕಟ್ಟು ಹೊಂದಿದ್ದು, ಕಪ್ಪು ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದನು. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಸುಳಿವು ಸಿಕ್ಕರೆ 7483006010 ಸಂಪರ್ಕಿಸುವಂತೆ ಪೋಷಕರು ಮನವಿ ಮಾಡಿದ್ದಾರೆ.
Next Story