ವಿದ್ಯುತ್ ಕಂಬದಿಂದ ಬಿದ್ದು ಮೃತ್ಯು
ಶಂಕರನಾರಾಯಣ, ಡಿ.22: ಕಂಬ ಹತ್ತಿ ವಿದ್ಯುತ್ ಲೈನ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಪೀಡ್ಸ್ ಕಾಯಿಲೆಯಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಶಂಕರನಾರಾಯಣ ಕಯ್ಯಾಣಿಗೆ ಹೋಗುವ ರಸ್ತೆ ಬಳಿ ಡಿ.21ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಶೇಡಿಮನೆ ಗ್ರಾಮದ ರಾಮ ಅವರ ಅವಳಿ ಸಹೋದರ ಲಕ್ಷ್ಮಣ(30) ಎಂದು ಗುರುತಿಸಲಾಗಿದೆ. ಪೀಡ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮಣ ವಿದ್ಯುತ್ ಲೈನ್ ಕೆಲಸವನ್ನು ಮಾಡಿಕೊಂಡಿದ್ದು ಇವರು ಹೊಸದಾಗಿ ನಿಲ್ಲಿಸಿದ ಮೂರು ಕಂಬಗಳಲ್ಲಿನ ಲೈನ್ ಕೆಲಸವನ್ನು ಮಾಡಲು ಕಂಬ ಹತ್ತಿದ್ದರು.
ಈ ವೇಳೆ ಲಕ್ಷ್ಮಣ ಒಮ್ಮೇಲೆ ಪೀಡ್ಸ್ ಖಾಯಿಲೆಯಿಂದ ಸುಮಾರು 21 ಅಡಿ ಎತ್ತರ ಕಂಬದಿಂದ ಮಣ್ಣಿನ ನೆಲಕ್ಕೆ ಬಿದ್ದರೆನ್ನ ಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಇವರು ಅವಳಿ ಸಹೋದರ ಆಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story