ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿಗೆ ಪ್ರಭಾ ರಾವ್ ಆಯ್ಕೆ
ಉಡುಪಿ, ಡಿ.27: ಸಂಘಟಕಿ, ಸಮಾಜ ಸೇವಕಿ ಹಾಗೂ ಕನ್ನಡ ಜಾನಪದ ಪರಿಷತ್ ಉಡುಪಿ ತಾಲೂಕು ಘಟಕದ ಸಂಚಾಲಕಿ ಪ್ರಭಾ.ಕೆ ರಾವ್ ಕಲ್ಯಾಣಪುರ ದಾವಣಗೆರೆಯ ಸಾಲಿಗ್ರಾಮ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ವತಿಯಿಂದ 70ನೇ ವರ್ಷದ ಕನ್ನಡ ನಿತ್ಯೋತ್ಸವದ ಅಂಗವಾಗಿ ನೀಡುವ 2025ನೇ ಸಾಲಿನ ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ.
2025ರ ಎ.27ರಂದು ದಾವಣಗೆರೆಯ ಚನ್ನಗಿರಿ ವಿರೂಪಾಕ್ಷಪ್ಪಕಲ್ಯಾಣ ಮಂಟಪದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ ಪ್ರಸ್ತುತ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Next Story