ಯೋಧ ಅನೂಪ್ ಕುಟುಂಬಕ್ಕೆ ನೆರವಿಗೆ ಪ್ರಯತ್ನ: ಕೋಟ ಶ್ರೀನಿವಾಸ ಪೂಜಾರಿ
ಶ್ರೀನಿವಾಸ ಪೂಜಾರಿ
ಉಡುಪಿ: ಅಪಘಾತದಲ್ಲಿ ಮೃತಪಟ್ಟ ಯೋಧ ಅನೂಪ್ ಪೂಜಾರಿ ಸಾವಿಗೆ ಕೋಟ್ಯಾಂತರ ಜನ ನೋವು ವ್ಯಕ್ತಪಡಿಸಿದ್ದಾರೆ. ಅನೂಪ್ ಹೆಸರಿನಲ್ಲಿ ಶಾಶ್ವತವಾದ ಸ್ಮಾರಕ ಆಗಬೇಕು ಮತ್ತು ಪತ್ನಿ ಮಂಜುಶ್ರೀ ಅವರಿಗೆ ಉದ್ಯೋಗ ಕೊಡಬೇಕು ಎಂಬ ಅಭಿಪ್ರಾಯ ಇದೆ. ರಾಜ್ಯ ಕೇಂದ್ರ ಎಲ್ಲರೂ ಒಟ್ಟಾಗಿ ಕುಟುಂಬಕ್ಕೆ ನೆರವು ನೀಡಲು ಪ್ರಯತ್ನ ಮಾಡುತ್ತೇವೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಭಾಪತಿ ಯು.ಟಿ.ಖಾದರ್ ಭೇಟಿ ಸಂದರ್ಭ ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಕೇಂದ್ರ ಕಾಂಗ್ರೆಸ್ ಬಿಜೆಪಿ ಎಂಬ ರಾಜಕಾರಣ ಮಾಡಲ್ಲ. ಪುಟ್ಟ ಮಗುವಿಗೆ ಪತ್ನಿಗೆ ಕುಟುಂಬಕ್ಕೆ ಸಹಕಾರ ಕೊಡಬೇಕಾಗಿರುವ ಸರಕಾರ ಮತ್ತು ಸಮಾಜದ ಜವಾಬ್ದಾರಿ ಎಂದು ತಿಳಿಸಿದರು.
Next Story