ರಸ್ತೆಯಲ್ಲಿಯೇ ಗೂಳಿ ಕಾಳಗ: ವಾಹನ ಸಂಚಾರಕ್ಕೆ ತೊಂದರೆ
ಗಂಗೊಳ್ಳಿ, ಡಿ.28: ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ಸಮೀಪ ಮುಖ್ಯ ರಸ್ತೆಯಲ್ಲಿ ಇಂದು ಎರಡು ಗೂಳಿಗಳು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಾಟ ನಡೆಸಿದ ಪರಿಣಾಮ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣ ವಾಗಿತ್ತು.
ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ರಸ್ತೆಯಲ್ಲಿ ಭಯದಿಂದ ಸಂಚರಿಸಿದರು. ಗೂಳಿ ಕಾಳಗವನ್ನು ತಪ್ಪಿಸಲು ಸ್ಥಳೀಯರು ಹರ ಸಾಹಸಪಟ್ಟರು. ಪಂಪ್‌ಸೆಟ್ ಮೂಲಕ ನೀರು ಹಾಯಿಸಿದರೂ, ಬೆಂಕಿಯನ್ನು ಹತ್ತಿರ ತಂದರೂ, ಪಟಾಕಿ ಸಿಡಿಸಿದರೂ ಕಾದಾಟ ನಡೆಸುತ್ತಿದ್ದ ಗೂಳಿಗಳನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ.
ಸುಮಾರು ಅರ್ಧ ಗಂಟೆ ಬಳಿಕ ಒಂದು ಗೂಳಿ ಓಡಿ ಹೋಗಿ ಕಾಳಗ ಕೊನೆಗೊಂಡಿತು. ಇದರಿಂದ ಜನ ನೆಮ್ಮದಿಯ ನಿಟ್ಟು ಸಿರು ಬಿಡುವಂತಾಯಿತು. ಗೂಳಿಗಳು ಮುಖ್ಯರಸ್ತೆಯಲ್ಲಿ ಕಾದಾಟ ನಡೆಸಿದ ಪರಿಣಾಮ ವಾಹನ ಹಾಗೂ ಪಾದಚಾರಿಗಳ ಸಂಚಾರ ತೊಂದರೆಯಾಯಿತು.
Next Story