ಕಂಟೈನರ್ - ಬೈಕ್ ಅಪಘಾತ: ಪತ್ನಿ ಮೃತ್ಯು, ಪತಿಗೆ ಗಾಯ
ಬ್ರಹ್ಮಾವರ, ಜ.6: ಕಂಟೈನರ್ ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಪತ್ನಿ ಮೃತಪಟ್ಟು, ಪತಿ ಗಾಯಗೊಂಡ ಘಟನೆ ಹೇರೂರು ಗ್ರಾಮದ ಶೆಟ್ಟಿಗಾರ್ ಇಂಡಸ್ಟ್ರೀಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜ.5ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಬೈಂದೂರು ಬೋಳಂಬಳ್ಳಿ ಗ್ರಾಮದ ಸತೀಶ ಎಂಬವರ ಪತ್ನಿ ನಾಗವೇಣಿ(30) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಮೃತರ ಪತಿ ಸತೀಶ್ ಗಾಯಗೊಂಡಿದ್ದಾರೆ. ಇವರಿಬ್ಬರು ಬೈಕಿನಲ್ಲಿ ಬೈಂದೂರಿನಿಂದ ಮಣಿಪಾಲಕ್ಕೆ ಹೋಗುತ್ತಿದ್ದಾಗ ಹಿಂದುಗಡೆಯಿಂದ ಬಂದ ಕಂಟೈನರ್ ಲಾರಿ ಬೈಕಿನ ಹ್ಯಾಂಡಲಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಸತೀಶ್ ಹಾಗೂ ನಾಗವೇಣಿ ಬೈಕ್ ಸಮೇತ ರಸ್ತೆಗೆ ಬಿದ್ದರು. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ನಾಗವೇಣಿ ಚಿಕಿತ್ಸೆ ಫಲಕಾರಿ ಯಾಗದೆ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story