ಬೋಟಿನಿಂದ ಬಿದ್ದು ಮೀನುಗಾರ ಸಮುದ್ರಪಾಲು
ಮಲ್ಪೆ: ಮಲ್ಪೆ ಅರಬ್ಬಿ ಸಮುದ್ರದಲ್ಲಿ ಸುಮಾರು 10 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರರೊಬ್ಬರು ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಜ.5ರಂದು ರಾತ್ರಿ ವೇಳೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಜನಾರ್ದನ (41) ಎಂಬವರು ಲಂಬೋದರ ಎಂಬ ಆಳ ಸಮುದ್ರ ಮೀನುಗಾರಿಕೆ ಬೋಟಿನಲ್ಲಿ ಇತರರೊಂದಿಗೆ ಸೇರಿ ಬಲೆಯನ್ನು ಎಳೆಯುವಾಗ ಆಯತಪ್ಪಿನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story