ತಮಿಳುನಾಡಿನಲ್ಲಿ ಬಿಜೆಪಿಗೆ ಬೆಂಬಲಕ್ಕಾಗಿ ಶ್ರಮ: ಅಣ್ಣಾಮಲೈ
ಉಡುಪಿ, ಜ.11: ತಮಿಳುನಾಡು ವಿಧಾನಸಭೆಗೆ 2026ರ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಶೇ.4ರ ಓಟಿನ ಮೇಲೆ ಎಂಟು ಪಕ್ಷಗಳಿವೆ. ನಾವೆಲ್ಲರೂ ತುಂಬಾ ಕಷ್ಟ ಪಡುತ್ತಿದ್ದೇವೆ. ತಮಿಳುನಾಡಿನಲ್ಲಿ ಬಿಜೆಪಿಗೆ ಬೆಂಬಲ ಸಿಗಬೇಕು ಎಂದು ಶ್ರಮಿಸುತ್ತಿದ್ದೇವೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಪ್ರಧಾನಿ ಬಗ್ಗೆ ಒಳ್ಳೆ ಹೆಸರು ಇದೆ. ಬಿಜೆಪಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸ್ಥಳೀಯ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದೇವೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ. 2026ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚುತ್ತಿದೆ. ಈ ಸರಕಾರ ಬಂದ ನಂತರ ಅಣ್ಣಾ ವಿಶ್ವವಿದ್ಯಾನಿಲದ ಒಳಗೆ ಒಬ್ಬರ ಅತ್ಯಾಚಾರ ಆಗಿದೆ. ದಿನಂಪ್ರತಿ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಿದೆ. ಡಿಎಂಕೆ ಸರಕಾರ ಅಧಿಕಾರದಿಂದ ಇಳಿಯಬೇಕು. ಅದಕ್ಕಾಗಿ ನಾನು ಚಪ್ಪಲಿ ಧರಿಸುವುದನ್ನು ಬಿಟ್ಟಿದ್ದೇನೆ ಎಂದು ಅವರು ತಿಳಿಸಿದರು.