ಕುಸಿದು ಬಿದ್ದು ನಿವೃತ್ತ ಯೋಧ ಮೃತ್ಯು
ಕುಂದಾಪುರ, ಜ.11: ನಿವೃತ್ತ ಯೋಧ ಕೋಡಿಬೆಂಗ್ರೆಯ ರಾಮದಾಸ ಜತ್ತನ್ನ(58) ಎಂಬವರು ಜ.10ರಂದು ಸಂಜೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಸಿ.ಆರ್.ಪಿ.ಎಫ್.ನಲ್ಲಿ ಉದ್ಯೋಗ ಮಾಡಿಕೊಂಡಿದ್ದಕ್ಕೆ ಇವರಿಗೆ ಕಂದಾವರ ಗ್ರಾಮದ ಬಡಾಗುಡ್ಡೆ ಎಂಬಲ್ಲಿ ನಾಲ್ಕು ಎಕರೆ ಜಾಗ ಮಂಜೂರಾಗಿದ್ದು, ಅಲ್ಲಿನ ತೋಟದ ಹುಲ್ಲನ್ನು ಮೆಷಿನಿಂದ ಕಟ್ಟಿಂಗ್ ಮಾಡುತ್ತಿದ್ದ ವೇಳೆ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story