ಬೈಂದೂರು ಐಸಿವೈಎಂ -ವೈಸಿಎಸ್ ವಾರ್ಷಿಕೋತ್ಸವ
ಬೈಂದೂರು, ಜ.12: ಬೈಂದೂರು ಐ.ಸಿ.ವೈ.ಎಂ. ಹಾಗೂ ವೈಸಿಎಸ್ ಸಂಘಟನೆಗಳ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ಜರಗಿತು.
ಅಧ್ಯಕ್ಷತೆಯನ್ನು ಚರ್ಚಿನ ಧರ್ಮಗುರು ವಂ.ವಿನ್ಸೆಂಟ್ ಕುವೆಲ್ಲೊ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು. ಬೈಂದೂರು ಹೋಲಿ ಕ್ರಾಸ್ ಸೌಹಾರ್ದ ಕೋಆಪರೇಟಿವ್ ಸೊಸೈಟಿ ಸಂಸ್ಥಾಪಕ ಡಾನಿಯಲ್ ನಜ್ರೆತ್, ಉದ್ಯಮಿ ಸಾಮುಯೆಲ್ ಆಲೊಶಿಯಸ್ ರೇಬೆರೊ, ಸಿ.ಎ. ಪರಿಕ್ಷೆಯಲ್ಲಿ ಉತ್ತೀರ್ಣ ರಾದ ನಿಕೊಲಾ ರೊಶನಿ ಡಾಯಸ್, ಇಗರ್ಜಿ ಸಿಬ್ಬಂದಿಗಳಾದ ವಲೇರಿಯನ್ ಫೆರ್ನಾಂಡಿಸ್, ಲಿಯೊ ನಜ್ರೆತ್, ರೊಬರ್ಟ್ ರೆಬೆಲ್ಲೊ, ಲಾರೆನ್ಸ್ ಫೆರ್ನಾಂಡಿಸ್ ಮತ್ತು ತೆರೆಜಾ ನಜ್ರೆತ್ ಅವರನ್ನು ಸನ್ಮಾನಿಸಲಾಯಿತು.
ಸಹಾಯಕ ಧರ್ಮಗುರು ವಂ.ಜೊಸ್ವಿನ್ ಪಿರೇರಾ, ವಂ.ರೊಯಲ್ ನಜ್ರೆತ್, ಬೈಂದೂರು ಕಾನ್ವೆಂಟ್ ಸುಪಿರಿಯರ್ ಸಿಸ್ಟರ್ ಆನ್ಸಿ ಪಾವ್ಲ್, ಪಾಲನ ಮಂಡಳಿಯ ಕಾರ್ಯದರ್ಶಿ ವೀಣಾ ಫೆರ್ನಾಂಡಿಸ್, ಆಯೋಗಗಳ ಸಂಯೋಜಕಿ ಅನಿತಾ ನಜ್ರೆತ್, ಐ.ಸಿ.ವೈ.ಎಂ. ಸಚೇತಕ ಪ್ರದಿಪ್ ಫೆರ್ನಾಂಡಿಸ್, ವೈ.ಸಿ.ಎಸ್. ಸಚೇತಕಿ ಆಶಾ ಡಾಯಸ್, ಐ.ಸಿ.ವೈ.ಎಂ. ಕಾರ್ಯ ದರ್ಶಿ ಪ್ರಜ್ವಲ್ ರೊಡ್ರಿಗಸ್, ವೈ.ಸಿ.ಎಸ್. ಕಾರ್ಯದರ್ಶಿ ಜೊಯ್ಲೆಟ್ ನಜ್ರೆತ್, ಐ.ಸಿ.ವೈ.ಎಂ. ಕುಂದಾಪುರ ವಲಯದ ಅಧ್ಯಕ್ಷ ನಿತಿನ್ ಬರೆಟ್ಟೊ, ಕಾರ್ಯದರ್ಶಿ ಮನಿಶಾ ಡಿಮೆಲ್ಲೊ, ವೈ.ಸಿ.ಎಸ್. ಕುಂದಾಪುರ ವಲಯದ ಅಧ್ಯಕ್ಷ ರಾಯನ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಐ.ಸಿ. ವೈ.ಎಂ. ಅಧ್ಯಕ್ಷ ರುಬೆನ್ ನಜ್ರೆತ್ ಸ್ವಾಗತಿಸಿದರು. ಪ್ರಿತಿಕಾ ಗ್ರಾಸ್ ಕಾರ್ಯಕ್ರಮ ನಿರೂಪಿಸಿದರು. ವೈ.ಸಿ.ಎಸ್ ಅಧ್ಯಕ್ಷೆ ಶನಲ್ ಫೆರ್ನಾಂಡಿಸ್ ವಂದಿಸಿದರು. ಜೋಸೆಫ್ ಫೆರ್ನಾಂಡಿಸ್ ನಿರ್ದೇಶನದ ರಂಗಕರ್ಮಿ ಬರ್ನಾಡ್ ಡಿಕೋಸ್ತಾ ಅವರ ಮೊಜಿ ಆಸ್ತ್, ಮೊಜೊ ವಾಂಟೊ(ನನ್ನ ಆಸ್ತಿ, ನನ್ನ ಪಾಲು) ನಾಟಕವನ್ನು ಐ.ಸಿ.ವೈ.ಎಂ. ಸದಸ್ಯರು ಪ್ರದರ್ಶಿಸಿದರು.