ಸಮರ್ಥ ರಾವ್‌ಗೆ ‘ಗ್ರ್ಯಾಂಡ್ ಮಾಸ್ಟರ್ ತಿಪ್ಸೆ’ ಪ್ರಶಸ್ತಿ ಪ್ರದಾನ
ಕುಂದಾಪರ, ಜ.12: ಕುಂದಾಪುರದ ಕಶ್ವಿ ಚೆಸ್ ಸ್ಕೂಲ್ ವತಿಯಿಂದ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಪ್ರವೀಣ್ ಮಹಾದೇವ್ ತಿಪ್ಸೆ ಅವರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿ ವಿತರಣಾ ಸಮಾರಂಭ ಕೋಟೇಶ್ವರದ ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ನಡೆಯಿತು.
ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಪಡೆದು ದೇಶಕ್ಕೆ ಹೆಮ್ಮೆ ತಂದ ಸಮರ್ಥ ಜೆ.ರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರವೀಣ್ ಮಹದೇವ್ ತಿಪ್ಸೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಯುವ ಮೆರೆಡಿಯನ್ ಆಡಳಿತ ಪಾಲುದಾರರಾದ ಬಿ.ಉದಯ್ ಕುಮಾರ್ ಶೆಟ್ಟಿ, ವಿನಯ್ ಕುಮಾರ್ ಶೆಟ್ಟಿ, ಮುಂಬೈ ಉದ್ಯಮಿ ಆದರ್ಶ ಶೆಟ್ಟಿ, ಯಡ್ತಾಡಿ ಗ್ರಾಪಂ ಅಧ್ಯಕ್ಷ ಎಚ್.ಪ್ರಕಾಶ್ ಶೆಟ್ಟಿ, ಕುಂದಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಕಾರ್ಮಿಕ ಸಂಘ ಬೆಂಗಳೂರು ಇದರ ಮಾಜಿ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಹಾಗೂ ಅಂತಾರಾಷ್ಟ್ರೀಯ ಆರ್ಬಿಟರ್ ಬೆಂಗಳೂರಿನ ಸಲೀಮ್ ಬೇಗ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚೆಸ್ ಸಾಧಕರಾದ ನಂದಕುಮಾರ್ ಸೂಲಿಕೆರೆ, ಅಣ್ಣಪ್ಪದೇವಾಡಿಗ, ಪಾವನಿ ಆರ್.ತೀರ್ಥಹಳ್ಳಿ, ಪ್ರಕೃತಿ ಪಿ.ಶೆಟ್ಟಿ, ಪ್ರದೀಪ್ ಪಾಟೀಲ್, ಆರಾಧ್ಯ ಎಸ್.ಶೆಟ್ಟಿ, ಮಹತಿ ರಾವ್ ಅವರನ್ನು ಸನ್ಮಾನಿಸ ಲಾಯಿತು. ಸ್ಪರ್ಧೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ಸುಮಾರು 500 ಸ್ಪರ್ಧಿಗಳು ಭಾಗವಹಿಸಿದ್ದಾರೆ.
ಕಶ್ವಿ ಚೆಸ್ ಸಂಸ್ಥೆಯ ಸಂಸ್ಥಾಪಕ ನರೇಶ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ್ ಕುಣಿಗಲ್ ಕಾರ್ಯಕ್ರಮ ನಿರೂಪಿಸಿದರು.