ಸಾಲಿಗ್ರಾಮ: ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ಸೂಚನೆ
ಉಡುಪಿ, ಜ.೧೩: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜನವರಿ 16ರಿಂದ 18ರವರೆಗೆ ನಡೆಯುವ ಶ್ರೀ ಗುರುನರಸಿಂಹ ದೇವರ ಮತ್ತು ಆಂಜನೇಯ ದೇವರ ಜಾತ್ರಾ ಮಹೋತ್ಸವವನ್ನು ಪ್ಲಾಸ್ಟಿಕ್ಮುಕ್ತ ಜಾತ್ರೆಯನ್ನಾಗಿ ಆಚರಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಭಕ್ತಾದಿ ಗಳಲ್ಲಿ ಮನವಿ ಮಾಡಿದೆ.
ಜಾತ್ರೆಗೆ ಆಗಮಿಸುವ ಭಕ್ತಾದಿಗಳು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ, ಮಾರಾಟ, ಸಂಗ್ರಹಣೆ, ಸಾಗಾಣಿಕೆ ಹಾಗೂ ಸರಬರಾಜು ಮಾಡದೇ, ಪ್ಲಾಸ್ಟಿಕ್ ಚೀಲ ಬದಲು ಬಟ್ಟೆ ಚೀಲ, ಪೇಪರ್ ಚೀಲ, ಸೆಣಬಿನ ಚೀಲ ಅಥವಾ ಬೀಣಿ ಚೀಲಗಳನ್ನು ಬಳಸಿ ಸಾಲಿಗ್ರಾಮ ಜಾತ್ರೆಯನ್ನು ಪ್ಲಾಸ್ಟಿಕ್ ಮುಕ್ತ ಜಾತ್ರೆಯನ್ನಾಗಿಸಲು ಸಹಕರಿಸುವಂತೆ ಮನವಿ ಮಾಡಲಾಗಿದೆ.
ತಪ್ಪಿದ್ದಲ್ಲಿ ಸರಕಾರದ ಆದೇಶದಂತೆ ನಿಗದಿತ ದಂಡ ಶುಲ್ಕ ವಿಧಿಸಿ ಮುಂದಿನ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿ ಪ್ರಕಟಣೆ ತಿಳಿಸಿದೆ.
Next Story